ಹಾಲಿ ಪರಿಸ್ಥಿತಿಯಲ್ಲಿ ಆಸ್ಟ್ರೇಲಿಯಾ ತಂಡ ಸೋಲಿನತ್ತ ಮುಖ ಮಾಡಿದ್ದು, ಭಾರತೀಯ ಬೌಲರ್ ಗಳು ಬಾಕಿ ಉಳಿದಿರುವ 1 ವಿಕೆಟ್ ಪಡೆದರೆ ಆಸ್ಟ್ರೇಲಿಯಾದಲ್ಲಿ ಐತಿಹಾಸಿಕ ಗೆಲುವು ತಂಡದಾಗುತ್ತದೆ. ನಿನ್ನೆ ಅಂತಿಮ ದಿನಕ್ಕೆ ಬ್ಯಾಟಿಂಗ್ ಕಾಯ್ದು ಕೊಂಡಿದ್ದ ಅಪಾಯಕಾರಿ ಬ್ಯಾಟ್ಸಮನ್ ಶಾನ್ ಮಾರ್ಷ್ ಇಂದು ಅರ್ಧಶತಕ ಸಿಡಿಸಿ ಭಾರತದ ಆತಂಕಕ್ಕೆ ಕಾರಣವಾಗಿದ್ದರು. ಆದರೆ 60 ರನ್ ಗಳಿಸಿದ್ದ ಮಾರ್ಷ್ ಬುಮ್ರಾ ಬೌಲಿಂಗ್ ನಲ್ಲಿ ಅನಗತ್ಯವಾಗಿ ಚೆಂಡನ್ನು ಕೆಣಕಿ ರಿಷಬ್ ಪಂತ್ ಗೆ ಕ್ಯಾಚ್ ನೀಡಿ ಹೊರ ನಡೆದರು.