ಪರ್ಥ್: ಟೀಂ ಇಂಡಿಯಾದ ವೇಗಿ ಇಶಾಂತ್ ಶರ್ಮಾ ಹಲವು ನೋ ಬಾಲ್ ಮಾಡಿದ್ದಾರೆ ಎಂದು ಆಸ್ಟ್ರೇಲಿಯಾ ಮಾಧ್ಯಮಗಳು ಟೀಕೆ ಮಾಡಿರುವುದಕ್ಕೆ ಡೋಂಟ್ ಕೇರ್ ಎಂದಿದ್ದಾರೆ.
ನೋ ಬಾಲ್ ಕಮೆಂಟ್ ಬಗ್ಗೆ ಬಹುಶ ಆಸ್ಟ್ರೇಲಿಯಾ ಮಾಧ್ಯಮಗಳೇ ಉತ್ತರ ನೀಡಬೇಕುನಾನಲ್ಲ ಎಂದು ಹೇಳಿದ್ದಾರೆ. ನಾನು ಬಹಳ ಕ್ರಿಕೆಟ್ ಆಡುತ್ತಿದ್ದೇನೆ. ಇಂತಹ ಘಟನೆಗಳು ನಡೆಯುತ್ತಿರುತ್ತವೆ. ಯಾಕೆಂದರೆ ನಾನು ಮನುಷ್ಯನೇ ಅಲ್ಲವೇ, ಇಂತಹ ಟೀಕೆಗಳ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ ಎಂದು ಖಡಕ್ಕಾಗಿ ಹೇಳಿದ್ದಾರೆ.
ಅಡಿಲೇಡ್ ಟೆಸ್ಟ್ ನಲ್ಲಿ ಇಶಾಂತ್ ಶರ್ಮಾ ಅಂಪೈರ್ ಅವರ ಅಟೆನ್ಷನ್ ವಂಚಿಸಿ ಕೆಲವು ನೋ ಬಾಲ್ ಎಂದು ಆಸೀಸ್ ಮಾಧ್ಯಮಗಳು ಬರೆದುಕೊಂಡಿದ್ದವು. ಈ ಹಿನ್ನೆಲೆಯಲ್ಲಿ ಇಶಾಂತ್ ಆಸ್ಟ್ರೇಲಿಯಾ ಮಾಧ್ಯಮಗಳಿಗೆ ಈ ರೀತಿಗಾಗಿ ಟಾಂಗ್ ಕೊಟ್ಟಿದ್ದಾರೆ.
ಪರ್ತ್ ನಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದಲ್ಲಿ ಇಶಾಂತ್ ಮೊದಲ ಇನ್ನಿಂಗ್ಸ್ ನಲ್ಲಿ ಆಸ್ಟ್ರೇಲಿಯಾದ ನಾಲ್ಕು ವಿಕೆಟ್ ಗಳನ್ನು ಪಡೆದು ಕಾಂಗರೂಗಳಿಗೆ ಸಿಂಹಸ್ವಪ್ನರಾಗಿದ್ದಾರೆ.