2008ರ ಸಿಡ್ನಿ ಟೆಸ್ಟ್ ನಲ್ಲಿ ಸೌರವ್ ಗಂಗೂಲಿ ಸಿಡಿಸಿದ ಚೆಂಡನ್ನು ಸ್ಪಿಪ್ ನಲ್ಲಿದ್ದ ಮೈಕಲ್ ಕ್ಲಾರ್ಕ್ ಹಿಡಿದಿದ್ದರು. ಆದರೆ ಚೆಂಡು ನೆಲಕ್ಕೆ ತಾಕಿತ್ತು. ಇದರಿಂದಾಗಿ ಗಂಗೂಲಿ ನಾಟೌಟ್ ಎಂದು ಅಲ್ಲೇ ನಿಂತಿದ್ದರು. ಆದರೆ ಅಂಪೈರ್ ಆಸ್ಟ್ರೇಲಿಯಾ ಮಾಜಿ ನಾಯಕ ರಿಕಿ ಪಾಂಟಿಂಗ್ ಅವರ ಮಾತು ಕೇಳಿ ಔಟ್ ನೀಡಿದ್ದು ವಿವಾದಕ್ಕೆ ಕಾರಣವಾಗಿತ್ತು.