ಈ ಹಿಂದೆ ವಿರಾಟ್ ಕೊಹ್ಲಿ ಅಭಿಮಾನಿಯೊಬ್ಬನಿಗೆ ದೇಶ ಬಿಟ್ಟು ಹೋಗು ಎಂದು ಹೇಳಿ ವಿವಾದಕ್ಕೆ ಗುರಿಯಾಗಿದ್ದರು. ಈ ಘಟನೆ ಕುರಿತು ಫೇಸ್ ಬುಕ್ ನಲ್ಲಿ ಬರೆದುಕೊಂಡಿರುವ ಬಾಲಿವುಡ್ ಹಿರಿಯ ನಟ ನಾಸಿರುದ್ದೀನ್ ಶಾ, ಕೊಹ್ಲಿ ಜಗತ್ತಿನ ಅತ್ಯುತ್ತಮ ಬ್ಯಾಟ್ಸ್ ಮನ್ ಅಷ್ಟೇ ಅಲ್ಲ. ಜಗತ್ತಿನ ಅತೀ ಕೆಟ್ಟ ವರ್ತನೆಯ ಆಟಗಾರ. ಅವರ ಕ್ರಿಕೆಟ್ ಪ್ರವೃತ್ತಿಯು ತನ್ನ ಸೊಕ್ಕಿನ ಮತ್ತು ಕೆಟ್ಟ ನಡವಳಿಕೆ ತೋರುತ್ತಾ ಬಂದಿದ್ದಾರೆ. ಇಷ್ಟಾದರೂ ನನಗೆ ಈ ದೇಶ ಬಿಡುವ ಉದ್ದೇಶವಿಲ್ಲ ಎಂದು ಬರೆದುಕೊಂಡಿದ್ದಾರೆ.