ಆರ್‌ಸಿಬಿಗೆ ಶಿವಂ ದುಬೆ ಆಯ್ಕೆಯಾಗಲು ಕಾರಣವಾದ ಬ್ಯಾಕ್ ಟು ಬ್ಯಾಕ್ 5 ಸ್ಫೋಟಕ ಸಿಕ್ಸರ್, ವಿಡಿಯೋ ವೈರಲ್!

ರಣಜಿ ಟ್ರೋಫಿಯಲ್ಲಿ ಬರೋಡಾ ವಿರುದ್ಧದ ಪಂದ್ಯದಲ್ಲಿ ಮುಂಬೈ ಆಲ್ ರೌಂಡರ್ ಶಿವಂ ದುಬೆ ಒಂದೇ ಓವರ್ ನಲ್ಲಿ ಸತತ ಐದು ಸಿಕ್ಸರ್ ಸಿಡಿಸಿದ್ದು ಆತನ ಹಣೆ ಬರಹವನ್ನೇ ಬದಲಾಯಿಸಿದೆ...
ಶಿವಂ ದುಬೆ
ಶಿವಂ ದುಬೆ
Updated on
ಬೆಂಗಳೂರು: ರಣಜಿ ಟ್ರೋಫಿಯಲ್ಲಿ ಬರೋಡಾ ವಿರುದ್ಧದ ಪಂದ್ಯದಲ್ಲಿ ಮುಂಬೈ ಆಲ್ ರೌಂಡರ್ ಶಿವಂ ದುಬೆ ಒಂದೇ ಓವರ್ ನಲ್ಲಿ ಸತತ ಐದು ಸಿಕ್ಸರ್ ಸಿಡಿಸಿದ್ದು ಆತನ ಹಣೆ ಬರಹವನ್ನೇ ಬದಲಾಯಿಸಿದೆ.
ಹೌದು 25 ವರ್ಷದ ಶಿವಂ ದುಬೆ ಅವರು ರಣಜಿ ಟ್ರೋಫಿ ಪಂದ್ಯದಲ್ಲಿ ಎಡಗೈ ಸ್ಪಿನ್ನರ್ ಸ್ವಪ್ನಿಲ್ ಸಿಂಗ್ ಓವರ್ ನಲ್ಲಿ ಐದು ಎಸೆತಗಳಲ್ಲಿ ಐದು ಸಿಕ್ಸರ್ ಸಿಡಿಸಿದ್ದು ಈ ವಿಡಿಯೋ ವೈರಲ್ ಆಗಿದೆ.
ಇನ್ನು ಶಿವಂ ದುಬೆ ಸ್ಫೋಟಕ ಬ್ಯಾಟಿಂಗ್ ಆತನ ಅದೃಷ್ಟ ಬದಲಾಯಿಸಿದ್ದು ಇಂಡಿಯನ್ ಪ್ರಿಮಿಯರ್ ಲೀಗ್ 2019ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು(ಆರ್ಸಿಬಿ) ತಂಡಕ್ಕೆ ಆಯ್ಕೆಯಾಗಿದ್ದಾರೆ. 
ಇದು ಬರೋಬ್ಬರಿ 5 ಕೋಟಿ ರುಪಾಯಿಗೆ ಶಿವಂ ದುಬೆ ಆರ್ಸಿಬಿಗೆ ಸೇಲಾಗಿದ್ದಾರೆ. ವಿರಾಟ್ ಕೊಹ್ಲಿ ನಾಯಕತ್ವದ ಆರ್ಸಿಬಿಗೆ ಶಿವಂ ದುಬೆ ಪ್ರಬಲ ಅಸ್ತ್ರವಾಗುತ್ತಾರೆ ಅನ್ನುವುದು ಮುಂದಿನ ವರ್ಷ ತಿಳಿಯಲಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com