ಇನ್ನು ಇದೇ ಕೊಹ್ಲಿ ಮತ್ತೊಂದು ದಾಖಲೆಯನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದು, ಆಸ್ಟ್ರೇಲಿಯಾ ವಿರುದ್ಧ ಗರಿಷ್ಠ ರನ್ ಬಾರಿಸಿರುವ ಭಾರತದ 2ನೇ ಆಟಗಾರ ಎಂಬ ಕೀರ್ತಿಗೂ ಭಾಜನರಾಗಿದ್ದಾರೆ. ಕಾಂಗರೂಗಳ ವಿರುದ್ಧ ಒಟ್ಟು 60 ಪಂದ್ಯಗಳನ್ನಾಡಿರುವ ಕೊಹ್ಲಿ 52.72ರ ಸರಾಸರಿಯಲ್ಲಿ 3216* ರನ್ ಕಲೆ ಹಾಕಿದ್ದಾರೆ. ಈ ಪೈಕಿ 12 ಶತಕ ಮತ್ತು 13 ಅರ್ಧಶತಕಗಳೂ ಕೂಡ ಸೇರಿವೆ. ಇನ್ನು ಪಟ್ಟಿಯಲ್ಲಿ ಭಾರತ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಅಗ್ರ ಸ್ಥಾನದಲ್ಲಿದ್ದು, ಸಚಿನ್ ಒಟ್ಟು 110 ಪಂದ್ಯಗಳನ್ನಾಡಿದ್ದು, 49.68 ಸರಾಸರಿಯಲ್ಲಿ 6707 ರನ್ ಗಳಿಸಿದ್ದಾರೆ. ಈ ಪೈಕಿ 20 ಶತಕ ಹಾಗೂ 31 ಅರ್ಧಶತಕಗಳೂ ಸೇರಿವೆ.