ಜಸ್ ಪ್ರೀತ್ ಬುಮ್ರಾ ಇದೇ 2018ರ ಜನವರಿ 5 ರಂದು ಟೆಸ್ಟ್ ಕ್ರಿಕೆಟ್ ಗೆ ಪದಾರ್ಪಣೆ ಮಾಡಿದ್ದರು. ಅಲ್ಲಿಂದ ಇಲ್ಲಿಯವರೆಗೂ ಬುಮ್ರಾ ಒಟ್ಟು 8 ಪಂದ್ಯಗಳನ್ನಾಡಿದ್ದು, ಇಂದಿನ ಪಂದ್ಯವೂ ಸೇರಿದಂತೆ ಒಟ್ಟು 41 ವಿಕೆಟ್ ಪಡೆದಿದ್ದಾರೆ. ಆ ಮೂಲಕ ಬುಮ್ರಾ ಪದಾರ್ಪಣೆ ಮಾಡಿದ ವರ್ಷದಲ್ಲೇ ಅತೀ ಹೆಚ್ಚು ವಿಕೆಟ್ ಪಡೆದ ಭಾರತದ ಆಟಗಾರ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ. ಬುಮ್ರಾ ಇಂದು ಆಸಿಸ್ ನ ಪ್ರಮುಖ ಬ್ಯಾಟ್ಸಮನ್ ಗಳಾದ ಮಾರ್ಕಸ್ ಹ್ಯಾರಿಸ್, ಟ್ರಾವಿಸ್ ಹೆಡ್, ಟಿಮ್ ಪೈನೆ, ನಾಥನ್ ಲ್ಯಾನ್ ಹಾಗೂ ಜೋಶ್ ಹೇಜಲ್ ವುಡ್ ಅವರನ್ನು ಔಟ್ ಮಾಡಿದ್ದರು. 15.5 ಓವರ್ ಬೌಲಿಂಗ್ ಮಾಡಿದ ಬುಮ್ರಾ ಕೇವಲ 33 ರನ್ ನೀಡಿದ 6 ವಿಕೆಟ್ ಪಡೆದಿದ್ದರು.