ಕ್ರಿಕೆಟ್

ಸ್ಲೆಡ್ಜಿಂಗ್ ಸುದ್ದಿ ಬೆನ್ನಲ್ಲೇ ಕೀಪಿಂಗ್ ನಲ್ಲಿ ವಿಶ್ವ ದಾಖಲೆ ಬರೆದ ರಿಷಬ್ ಪಂತ್!

ಆತಿಥೇಯ ಆಸ್ಟ್ರೇಲಿಯಾ ವಿರುದ್ಧ ಮೊದಲ ಟೆಸ್ಟ್​ ಪಂದ್ಯದಲ್ಲಿ 11 ಕ್ಯಾಚ್​ ಪಡೆಯುವ ಮೂಲಕ ಎಬಿಡಿ ಹಾಗೂ ಇಂಗ್ಲೆಂಡ್​ನ ಜಾಕ್​ ರಸೆಲ್ ಅವರ ದಾಖಲೆ ಸರಿಗಟ್ಟಿದ್ದ ಟೀಂ ಇಂಡಿಯಾ ಉದಯೋನ್ಮುಖ ಆಟಗಾರ​ ರಿಷಭ್​​ ಪಂತ್​ ಇದೀಗ ಬಾಕ್ಸಿಂಗ್​ ಡೇ ಟೆಸ್ಟ್​ ಪಂದ್ಯದಲ್ಲೂ ಮಗದೊಂದು ದಾಖಲೆ ನಿರ್ಮಿಸಿದ್ದಾರೆ.

ಸ್ಲೆಡ್ಜಿಂಗ್ ಸುದ್ದಿ ಬೆನ್ನಲ್ಲೇ ಕೀಪಿಂಗ್ ನಲ್ಲಿ ವಿಶ್ವ ದಾಖಲೆ ಬರೆದ ರಿಷಬ್ ಪಂತ್!
ಸಂಗ್ರಹ ಚಿತ್ರ
Published On :
ಮೆಲ್ಬೋರ್ನ್: ಆತಿಥೇಯ ಆಸ್ಟ್ರೇಲಿಯಾ ವಿರುದ್ಧ ಮೊದಲ ಟೆಸ್ಟ್​ ಪಂದ್ಯದಲ್ಲಿ 11 ಕ್ಯಾಚ್​ ಪಡೆಯುವ ಮೂಲಕ ಎಬಿಡಿ ಹಾಗೂ ಇಂಗ್ಲೆಂಡ್​ನ ಜಾಕ್​ ರಸೆಲ್ ಅವರ ದಾಖಲೆ ಸರಿಗಟ್ಟಿದ್ದ ಟೀಂ ಇಂಡಿಯಾ ಉದಯೋನ್ಮುಖ ಆಟಗಾರ​ ರಿಷಭ್​​ ಪಂತ್​ ಇದೀಗ ಬಾಕ್ಸಿಂಗ್​ ಡೇ ಟೆಸ್ಟ್​ ಪಂದ್ಯದಲ್ಲೂ ಮಗದೊಂದು ದಾಖಲೆ ನಿರ್ಮಿಸಿದ್ದಾರೆ.
ಮೂರನೇ ಟೆಸ್ಟ್​ ಪಂದ್ಯದ ಐದನೇ ದಿನದಾಟದ ಅಂತ್ಯದ ವೇಳೆಗೆ ಪಂತ್​ ಟೆಸ್ಟ್​ ಕ್ರಿಕೆಟ್​ ಸರಣಿಯೊಂದರಲ್ಲಿ ಅತಿ ಹೆಚ್ಚು ಕ್ಯಾಚ್​ ಮತ್ತು ಸ್ಟಂಪ್ (Dismissal) ಮಾಡಿದ ಭಾರತೀಯ ವಿಕೆಟ್ ಕೀಪರ್ ಎಂಬ ದಾಖಲೆಗೆ ಪಾತ್ರರಾಗಿದ್ದಾರೆ. ಟೆಸ್ಟ್​ ಸರಣಿಯಲ್ಲಿ ಒಟ್ಟು 20 ವಿಕೆಟ್ ಪತನ ಮಾಡಿದ ಕೀರ್ತಿಗೆ  ಭಾಜನರಾಗಿದ್ದಾರೆ. 
ಅಂತೆಯೇ ಪದಾರ್ಪಣೆ ಮಾಡಿದ ವರ್ಷದಲ್ಲಿ 40 ವಿಕೆಟ್ ಗಳಲ್ಲಿ ಭಾಗಿಯಾಗುವ ಮೂಲಕ ಪದಾರ್ಪಣೆ ವರ್ಷದಲ್ಲೇ ಗರಿಷ್ಠ ವಿಕೆಟ್ ಸಾಧನೆಗೈದ ವಿಕೆಟ್ ಕೀಪರ್ ಎಂಬ ಕೀರ್ತಿಗೆ ಪಂತ್ ಭಾಜನರಾಗಿದ್ದಾರೆ. ಈ ಪಟ್ಟಿಯಲ್ಲಿ ಪಂತ್ ಆಸ್ಟ್ರೇಲಿಯಾದ ಬ್ರಾಡ್ ಹಡ್ಡಿನ್ ದಾಖಲೆಯನ್ನು ಸರಿಗಟ್ಟಿದ್ದು, 2008ರಲ್ಲಿ ಪದಾರ್ಪಣೆ ಮಾಡಿದ್ದ ಹಡ್ಡಿನ್ 42 ವಿಕೆಟ್ ಗಳಲ್ಲಿ ಪಾಲ್ಗೊಳ್ಳುವ ಮೂಲಕ ಗರಿಷ್ಠ ಸಾಧನೆ ಗೈದಿದ್ದರು. ಇದೀಗ ಪಂತ್ ಕೂಡ ಅಷ್ಟೇ ಪ್ರಮಾಣದಲ್ಲಿ ವಿಕೆಟ್ ಗಳ ಪಡೆದ ಸಾಧನೆಗೈದಿದ್ದಾರೆ.
ಇನ್ನು ಪಟ್ಟಿಯಲ್ಲಿ ಮತ್ತೋರ್ವ ಆಸಿಸ್ ಆಟಗಾರ ಪೀಟರ್ ನೆವಿಲ್ 2ನೇ ಸ್ಥಾನದಲ್ಲಿದ್ದು, ಇವರು 36 ವಿಕೆಟ್ ಪಡೆದಿದ್ದರು. ಇನ್ನು 1979/80ರಲ್ಲಿ ಸೈಯದ್ ಕಿರ್ಮಾನಿ ಹಾಗೂ 1954/55ರಲ್ಲಿ ನರೆನ್ ತಹ್ಮೇನ್ 19 ಡಿಸ್ಮಿಸಲ್‌ನಲ್ಲಿ ಭಾಗಿಯಾಗಿದ್ದರು. ಈ ಪೈಕಿ ಪಂತ್ ಕೇವಲ 3 ಪಂದ್ಯಗಳಲ್ಲೇ ಈ ಸಾಧನೆ ಮಾಡಿದ್ದಾರೆ. ಇನ್ನು ಮಹೇಂದ್ರ ಸಿಂಗ್ ಧೋನಿ 2006ರ ವೆಸ್ಟ್‌ಇಂಡೀಸ್ ಹಾಗೂ 2014ರ ಇಂಗ್ಲೆಂಡ್‌ ವಿರುದ್ಧದ ಸರಣಿಯಲ್ಲಿ 17 ಡಿಸ್ಮಿಸಲ್‌ನಲ್ಲಿ ಭಾಗಿಯಾಗಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.