ವಿರಾಟ್ ಕೊಹ್ಲಿ ಒಟ್ಟು 24 ಟೆಸ್ಟ್ ಪಂದ್ಯಗಳಿಗೆ ತಂಡದ ಸಾರಥ್ಯ ವಹಿಸಿದ್ದು, ಈ ಪೈಕಿ 11 ಪಂದ್ಯಗಳಲ್ಲಿ ಜಯಭೇರಿ ಭಾರಿಸಿದ್ದಾರೆ. ಆ ಮೂಲಕ ಮಾಜಿ ನಾಯಕ ಸೌರವ್ ಗಂಗೂಲಿ ಅವರ ದಾಖಲೆ ಸರಿಗಟ್ಟಿದ್ದಾರೆ. ಗಂಗೂಲಿ 28 ಪಂದ್ಯಗಳಲ್ಲಿ ತಂಡದ ಸಾರಥ್ಯ ವಹಿಸಿದ್ದು, ಈ ಪೈಕಿ 11 ಪಂದ್ಯಗಳಲ್ಲಿ ಭಾರತ ಜಯ ಗಳಿಸಿದೆ. ಇನ್ನು ಎಂಎಸ್ ಧೋನಿ ಗರಿಷ್ಟ ಅಂದರೆ 30 ಪಂದ್ಯಗಳಿಗೆ ಭಾರತ ತಂಡದ ಸಾರಥ್ಯ ವಹಿಸಿದ್ದು, ಈ ಪೈಕಿ 6 ಪಂದ್ಯಗಳಲ್ಲಿ ಭಾರತ ಜಯ ಗಳಿಸಿದೆ. ಅಂತೆಯೇ ರಾಹುಲ್ ದ್ರಾವಿಡ್ 17 ಬಾರಿ ತಂಡದ ಸಾರಥ್ಯ ವಹಿಸಿದ್ದು, 5 ಬಾರಿ ತಂಡ ಜಯ ಗಳಿಸಿದೆ.