ಆಟದ ಮಧ್ಯೆ ಅಂಪೈರ್ ನಿರ್ಧಾರಕ್ಕೆ ಬೇಸರಗೊಂಡ ವಿರಾಟ್ ಕೊಹ್ಲಿ, ಪ್ರೇಕ್ಷಕರು!

ಆತಿಥೇಯ ದಕ್ಷಿಣ ಆಫ್ರಿಕಾ ಮತ್ತು ಭಾರತ ನಡುವಿನ ಎರಡನೇ ಏಕದಿನ ಪಂದ್ಯದಲ್ಲಿ ಅಂಪೈರ್ ಗಳ ನಿರ್ಧಾರ ಉಭಯ ತಂಡದ ಆಟಗಾರರು ಹಾಗೂ ಪ್ರೇಕ್ಷಕರನ್ನು...
ವಿರಾಟ್ ಕೊಹ್ಲಿ-ಪ್ರೇಕ್ಷಕರು
ವಿರಾಟ್ ಕೊಹ್ಲಿ-ಪ್ರೇಕ್ಷಕರು
Updated on: 
ಸೆಂಚೂರಿಯನ್: ಆತಿಥೇಯ ದಕ್ಷಿಣ ಆಫ್ರಿಕಾ ಮತ್ತು ಭಾರತ ನಡುವಿನ ಎರಡನೇ ಏಕದಿನ ಪಂದ್ಯದಲ್ಲಿ ಅಂಪೈರ್ ಗಳ ನಿರ್ಧಾರ ಉಭಯ ತಂಡದ ಆಟಗಾರರು ಹಾಗೂ ಪ್ರೇಕ್ಷಕರನ್ನು ಚಕಿತರನ್ನಾಗಿಸಿತ್ತು. 
ಸೆಂಚೂರಿಯನ್ ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ್ದ ಆಫ್ರಿಕಾ ತಂಡ 118 ರನ್ ಗಳಿಗೆ ಆಲೌಟ್ ಆಗಿತ್ತು. ಅಲ್ಪ ಮೊತ್ತದ ಗುರಿ ಬೆನ್ನಟ್ಟಿದ ಭಾರತ ತಂಡ 19 ಓವರ್ ಮುಕ್ತಾಯಕ್ಕೆ 117 ರನ್ ಸಿಡಿಸಿತ್ತು. ಈ ವೇಳೆ ಪಂದ್ಯ ಗೆಲ್ಲಲು ಭಾರತಕ್ಕೆ 2 ರನ್ ಗಳ ಅವಶ್ಯಕತೆ ಇತ್ತು. ಆದರೆ ಅಂಪೈರ್ ಗಳು ಮಾತ್ರ ಭೋಜನ ವಿರಾಮ ತೆಗೆದುಕೊಂಡಿದ್ದರು. 
ಈ ವೇಳೆ ಮೈದಾನದಲ್ಲಿದ್ದ ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಮತ್ತು ಪ್ರೇಕ್ಷಕರು ಅಂಪೈರ್ ಗಳ ನಿರ್ಧಾರದಿಂದ ಆಶ್ಚರ್ಯ ಚಕಿತರಾದರು. ಆದರೆ ಅಂಪೈರ್ ನಿರ್ಧಾರದಿಂದಾಗಿ ಪ್ರೇಕ್ಷಕರು ಅರ್ಧ ಗಂಟೆಗಳ ಕಾಲ ಮೈದಾನದಲ್ಲಿ ಕೂರುವಂತ ಪರಿಸ್ಥಿತಿ ಎದುರಾಯಿತು. 
ಭೋಜನ ವಿರಾಮ ಮುಗಿಸಿ ಬಂದ ವಿರಾಟ್ ಕೊಹ್ಲಿ ಮತ್ತು ಶಿಖರ್ ಧವನ್ 2 ರನ್ ಸಿಡಿಸಿ ಪಂದ್ಯ ಗೆದ್ದರು. ಈ ಮಧ್ಯೆ ಭೋಜನ ವಿರಾಮದ ಮಧ್ಯೆ ಹಲವು ಪ್ರೇಕ್ಷಕರು ಕ್ರೀಡಾಂಗಣದಿಂದ ಹೊರನಡೆದಿದ್ದರು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com