ವಿರಾಟ್ ಕೊಹ್ಲಿ 'ಜಿನಿಯಸ್' ಮತ್ತು ಜಗತ್ತಿನ ಅತ್ಯುತ್ತಮ ಆಟಗಾರ: ಪಾಕ್ ಮಾಜಿ ನಾಯಕ

ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಜಿನಿಯಸ್ ಮತ್ತು ಜಗತ್ತಿನ ಅತ್ಯುತ್ತಮ ಆಟಗಾರ ಎಂದು ಪಾಕಿಸ್ತಾನ ಮಾಜಿ ನಾಯಕ ಜಾವೇದ್ ಮಿಯಾಂದಾದ್ ಹೇಳಿದ್ದಾರೆ...
ವಿರಾಟ್ ಕೊಹ್ಲಿ
ವಿರಾಟ್ ಕೊಹ್ಲಿ
Updated on
ನವದೆಹಲಿ: ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಜಿನಿಯಸ್ ಮತ್ತು ಜಗತ್ತಿನ ಅತ್ಯುತ್ತಮ ಆಟಗಾರ ಎಂದು ಪಾಕಿಸ್ತಾನ ಮಾಜಿ ನಾಯಕ ಜಾವೇದ್ ಮಿಯಾಂದಾದ್ ಹೇಳಿದ್ದಾರೆ. 
ಆತಿಥೇಯ ದಕ್ಷಿಣ ಆಫ್ರಿಕಾ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ವಿರಾಟ್ ಕೊಹ್ಲಿ 160 ರನ್ ಬಾರಿಸುವ ಮೂಲಕ 34ನೇ ಶತಕ ಸಿಡಿಸಿದ್ದರು. ಅನ್ನು ಅತೀ ವೇಗವಾಗಿ 34ನೇ ಶತಕ ಸಿಡಿಸಿದ ಆಟಗಾರ ಎಂಬ ಖ್ಯಾತಿಗೂ ಕೊಹ್ಲಿ ಭಾಜನರಾಗಿದ್ದು ಈ ಹಿನ್ನೆಲೆಯಲ್ಲಿ ಪಾಕ್ ಮಾಜಿ ನಾಯಕ ಮಿಯಾಂದಾದ್ ಕೊಹ್ಲಿಯನ್ನು ಹೊಗಳಿದ್ದಾರೆ. 
ಮಾಧ್ಯಮವೊಂದರ ಜತೆಗಿನ ಸಂದರ್ಶನದ ವೇಳೆ ಮಿಯಾಂದಾದ್ ಭಾರತ ಸಂದಿಗ್ಧ ಸ್ಥಿತಿಯಲ್ಲಿ ಸಿಲುಕಿದ್ದಾಗ ಕೊಹ್ಲಿ ತಮ್ಮ ತಾಂತ್ರಿಕ ಕೌಶಲ್ಯದಿಂದ ತಂಡವನ್ನು ರಕ್ಷಿಸುವ ಸಾಮರ್ಥ್ಯವನ್ನು ಹೊಂದಿದ್ದಾರೆ ಎಂದು ಮಿಯಾಂದಾದ್ ಹೇಳಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com