ಮೊದಲ ಟೆಸ್ಟ್: ಬಾಂಗ್ಲಾದೇಶದ ವಿರುದ್ಧ ವಿಂಡೀಸ್ ಗೆ ಇನ್ನಿಂಗ್ಸ್, 219 ರನ್ ಗಳ ಭರ್ಜರಿ ಜಯ

ವೆಸ್ಟ್ ಇಂಡೀಸ್ ವಿರುದ್ಧ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಪ್ರವಾಸಿ ಬಾಂಗ್ಲಾದೇಶ ಇನ್ನಿಂಗ್ಸ್ ಮತ್ತು 219ರನ್ ಗಳ ಅಂತರದ ಹೀನಾಯ ಸೋಲು ಕಂಡಿದೆ.
ಬಾಂಗ್ಲಾ ಮೇಲೆ ವಿಂಡೀಸ್ ಸವಾರಿ
ಬಾಂಗ್ಲಾ ಮೇಲೆ ವಿಂಡೀಸ್ ಸವಾರಿ
ಆ್ಯಂಟಿಗುವಾ: ವೆಸ್ಟ್ ಇಂಡೀಸ್ ವಿರುದ್ಧ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಪ್ರವಾಸಿ ಬಾಂಗ್ಲಾದೇಶ ಇನ್ನಿಂಗ್ಸ್ ಮತ್ತು 219ರನ್ ಗಳ ಅಂತರದ ಹೀನಾಯ ಸೋಲು ಕಂಡಿದೆ.
ಮೊದಲ ಇನ್ನಿಂಗ್ಸ್ ನ ದಾಖಲೆಯ 43 ರನ್ ಗಳ ಅಲ್ಪ ಮೊತ್ತಕ್ಕೆ ಆಲೌಟ್ ಆಗಿದ್ದ ಬಾಂಗ್ಲಾದೇಶ ಇಂದು ತನ್ನ ಎರಡನೇ ಇನ್ನಿಂಗ್ಸ್ ನಲ್ಲಿ ಮತ್ತೆ ಕೇವಲ 144 ರನ್ ಗಳಿಗೆ ಆಲೌಟ್ ಆಯಿತು. ಆ ಮೂಲಕ ವಿಂಡೀಸ್ ವಿರುದ್ಧ ಇನ್ನಿಂಗ್ಸ್ ಮತ್ತು  219 ರನ್ ಗಳ ಹೀನಾಯ ಸೋಲುಕಂಡಿತು.
ವಿಂಡೀಸ್ ವೇಗಿಗಳ ಅಬ್ಬರದ ಬೌಲಿಂಗ್ ಮುಂದೆ ಬಾಂಗ್ಲಾ ಬ್ಯಾಟ್ಸಮನ್ ಮಂಕಾಗಿದ್ದು, ಬಾಂಗ್ಲಾದೇಶದ ಹೀನಾಯ ಸೋಲಿಗೆ ಕಾರಣವಾಯಿತು. ಎರಡನೇ ಇನ್ನಿಂಗ್ಸ್ ನಲ್ಲಿ ನುರುಲ್ ಹಸನ್ ಗಳಿಸಿದ 64 ರನ್ ಗಳೇ ಆ ತಂಡದ ಪರ ಬ್ಯಾಟ್ಸಮನ್ ಓರ್ವ ಸಿಡಿಸಿದ ವೈಯುಕ್ತಿಕ ಗರಿಷ್ಠ ರನ್ ಗಳಿಕೆಯಾಗಿತ್ತು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com