ಆರಂಭಿಕರಾಗಿ ಕಣಕ್ಕಿಳಿದ ಧವನ್ 23 ರನ್ ಗಳಿಸಿದ್ದಾಗ ಆಫ್ಘಾನ್ ಬೌಲರ್ ವಫಾದಾರ್ ಎಸೆದ 9ನೇ ಓವರ್ ನ 5 ಎಸೆತ ಬ್ಯಾಟ್ ಗೆ ತಗುಲಿ ಕೀಪರ್ ಕೈಸೇರಿತು. ಈ ವೇಳೆ ಕೀಪರ್ ಸೇರಿದಂತೆ ಮೈದಾನದಲ್ಲಿದ್ದ ಆಟಗಾರರೆಲ್ಲಾ ಅಪೀಲ್ ಮಾಡಿದರು. ಆದರೆ ಅಂಪೈರ್ ಇದನ್ನು ನಾಟೌಟ್ ಎಂದು ಘೋಷಿಸಿದರು. ಆಗ ಆಫ್ಘಾನ್ ನಾಯಕ ಸೇರಿದಂತೆ ಎಲ್ಲರು ಚರ್ಚೆ ನಡೆಸಿದರು. ಆದರೆ ಯಾರೂ ಬಾಲ್ ಬ್ಯಾಟ್ ಗೆ ತಗುಲಿದ್ದಾಗಿ ಸ್ಪಷ್ಟವಾಗಿ ಹೇಳದಿದ್ದ ಕಾರಣ ನಾಯಕ ಡಿಆರ್‌ಎಸ್ ತೆಗೆದುಕೊಳ್ಳಲು ಮುಂದಾಗಲಿಲ್ಲ. ಇದು ಧವನ್ ಸಿಕ್ಕ ಜೀವದಾನವಾಗಿದ್ದು ನಂತರ ಅವರು ಶತಕ ಸಿಡಿಸಿ ಸಂಭ್ರಮಿಸಿದರು.