ಬಾಲ್ ಟ್ಯಾಂಪರಿಂಗ್ ಶಾಕ್ ನಿಂದ ಮಗು ಕಳೆದುಕೊಂಡ ವಾರ್ನರ್ ದಂಪತಿ!

ಬಾಲ್ ಟ್ಯಾಂಪರಿಂಗ್ ಪ್ರಕರಣದಿಂದಾಗಿ ಕೇವಲ ಮೂವರು ಆಟಗಾರರ ಕ್ರಿಕೆಟ್ ಜೀವನ ಡೋಲಾಯಮಾನವಾಗಿದ್ದಷ್ಟೇ ಅಲ್ಲದೇ, ವಾರ್ನರ್ ದಂಪತಿ ತಮ್ಮ ಮೂರನೇ ಮಗುವನ್ನು ಕಳೆದುಕೊಂಡಿದ್ದಾರಂತೆ..
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಸಿಡ್ನಿ: ಬಾಲ್ ಟ್ಯಾಂಪರಿಂಗ್ ಪ್ರಕರಣದಿಂದಾಗಿ ಕೇವಲ ಮೂವರು ಆಟಗಾರರ ಕ್ರಿಕೆಟ್ ಜೀವನ ಡೋಲಾಯಮಾನವಾಗಿದ್ದಷ್ಟೇ ಅಲ್ಲದೇ, ವಾರ್ನರ್ ದಂಪತಿ ತಮ್ಮ ಮೂರನೇ ಮಗುವನ್ನು ಕಳೆದುಕೊಂಡಿದ್ದಾರಂತೆ..
ಹೌದು ಈ ವಿಚಾರವನ್ನು ಸ್ವತಃ ಡೇವಿಡ್ ವಾರ್ನರ್ ಪತ್ನಿ ಕ್ಯಾಡಿಸ್ ವಾರ್ನರ್ ಹೇಳಿದ್ದು, ಚೆಂಡು ವಿರೂಪಗೊಳಿಸಿದ ಪ್ರಕರಣದ ಬಳಿಕ ವಾರ್ನರ್ ತಮ್ಮ ಉಪನಾಯಕ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಲ್ಲದೇ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಹೇಳಿದ್ದರು. ನಿಜಕ್ಕೂ ಅದು ನಮ್ಮ ಜೀವನದ ಕಠಿಣ ಸಂದರ್ಭವಾಗಿತ್ತು. ಇದಾದ ಬಳಿಕ ನಮ್ಮನ್ನು ದೋಷಿಗಳಂತೆ ನೋಡಲಾಯಿತು. ನಿತ್ಯ ಬೈಗುಳ ಮತ್ತು ನಿಂದನೆಯಿಂದಾಗಿ ನಾನು ಆಘಾತಕ್ಕೊಳಗಾದೆ. ಇದೇ ಶಾಕ್ ನಲ್ಲೇ ನಾವು ನಮ್ಮ ಮಗುವನ್ನು ಕೂಡ ಕಳೆದುಕೊಂಡೆವು. ನನಗೆ ಗರ್ಭಪಾತವಾಯಿತು ಎಂದು ಕ್ಯಾಂಡಿಸ್ ಹೇಳಿದ್ದಾರೆ.
ಈ ಬಗ್ಗೆ ಆಸ್ಟ್ರೇಲಿಯಾದ ವೆಬ್ ಸೈಟ್ ವೊಂದು ಸುದ್ದಿ ಪ್ರಕಟ ಮಾಡಿದ್ದು, ಈ ವೇಳೆ ಹೇಳಿಕೆ ನೀಡಿರುವ ಕ್ಯಾಂಡಿಸ್, ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಪಂದ್ಯ ನಡೆಯುವಾಗ ನಾನು ಗರ್ಭಿಣಿಯಾಗಿದ್ದೆ. ಈ ವಿಚಾರ ಡೇವಿಡ್ ವಾರ್ನರ್ ಅವರಿಗೂ ತಿಳಿದಿತ್ತು. ನಾನು ತುಂಬಾ ಸಂತೋಷದಿಂದ ಇದ್ದೆವು. ಆದರೆ ಆ ನಮ್ಮ ಸಂತೋಷ ಆ ಕ್ಷಣಕ್ಕೆ ಮಾತ್ರ ಸೀಮಿತವಾಗಿತ್ತು. ಆ ಬಳಿಕ ನಡೆದ ಘಟನೆಗಳೆಲ್ಲಾ ನಮ್ಮ ಜೀವನದ ಅತ್ಯಂತ ಕಠಿಣ ಕ್ಷಣಗಳಾಗಿದ್ದವು. ಚೆಂಡು ವಿರೂಪಗೊಳಿಸಿದ ಪ್ರಕರಣದಲ್ಲಿ ವಾರ್ನರ್ ನಿಷೇಧಕ್ಕೆ ತುತ್ತಾದರು. ಅವರ ರಾಜಿನಾಮೆ ಕ್ಷಣವನ್ನಂತೂ ನಾನೆಂದು ಮರೆಯಲು ಸಾಧ್ಯವಿಲ್ಲ ಎಂದು ಕ್ಯಾಂಡಿಸ್ ಹೇಳಿದ್ದಾರೆ.
ಅಂತೆಯೇ ವಾರ್ನರ್ ರಾಜಿನಾಮೆ ಬಳಿಕವೂ ತಾವು ಕಠಿಣ ಕ್ಷಣಗಳನ್ನು ಎದುರಿಸಿದೆವು. ಸಾಮಾಜಿಕ ಜಾಲತಾಣಗಳಲ್ಲಿ ನಮ್ಮನ್ನು ದೇಶದ್ರೋಹಿಗಳಂತೆ ನಿಂದಿಸಿದರು. ಇದರಿಂದ ನಾನು ತೀವ್ರ ಆಘಾತಕ್ಕೆ ತುತ್ತಾಗಿದ್ದೆ. ಈ ಸಂದರ್ಭದಲ್ಲೇ ನನ್ನ ಹೊಟ್ಟೆಯಲ್ಲಿದ್ದ ಮಗು ಸರಿಯಾದ ಪಾಲನೆ ಇಲ್ಲದೇ ಅಸುನೀಗಿತು, ನನಗೆ ಗರ್ಭಪಾತವಾಯಿತು. ಬಹುಶಃ ಗನ್ ನಿಂದ ಹಾರುವ ಬುಲೆಟ್ ಗಳಿಗೆ ಬುಲೆಟ್ ಪ್ರೂಫ್ ಜಾಕೆಟ್ ಗಳಿದ್ದಂತೆ ಬಾಯಿದ ಹಾರುವ ಮಾತಿನ ಬುಲೆಟ್ ಗಳಿಗೂ ಬುಲೆಟ್ ಪ್ರೂಫ್ ಜಾಕೆಟ್ ಇದ್ದಿದ್ದರೆ ಇಂದು ನನ್ನ ಮಗು ಬದುಕಿರುತ್ತಿತ್ತು ಎಂದು ಕ್ಯಾಂಡಿಸ್ ಭಾವುಕರಾಗಿ ಹೇಳಿದ್ದಾರೆ.
'ಅಂದು ನನಗೆ ತೀವ್ರ ರಕ್ತಸ್ರಾವವಾಗುತ್ತಿತ್ತು. ಕೂಡಲೇ ವಾರ್ನರ್ ರನ್ನು ಕೂಗಿ ಹೇಳಿದೆ. ನನಗೆ ಗರ್ಭಪಾತವಾಗುತ್ತಿದೆ ಎಂದು ನನಗೆ ಆಗ ಅರಿವಿಗೆ ಬಂತು. ಆದರೆ ನಾವು ಅಸಹಾಯಕಾರಿಗಿದ್ದೆವು. ಅಂದಿನ ದಕ್ಷಿಣ ಆಫ್ರಿಕಾ ಪ್ರವಾಸ ನಮಗೆ ನಿಜಕ್ಕೂ ಭಯಾನಕವಾಗಿತ್ತು.  ಮೂರನೇ ಮಗುವಿನ ಜನ್ಮದ ಕುರಿತು ನಾವು ಎಷ್ಚು ಸಂತೋಷವಾಗಿದ್ದೆವೂ ಅದರ ಹತ್ತು ಪಟ್ಟು ದುಃಖವನ್ನು ನಾವು ಅನುಭವಿಸಿದ್ದೇವೆ ಎಂದು ಕ್ಯಾಂಡಿಸ್ ಹೇಳಿದ್ದಾರೆ.
ಇನ್ನು ಡೇವಿಡ್ ವಾರ್ನರ್ ಮತ್ತು ಕ್ಯಾಂಡಿಸ್ ಗೆ ಮೂರು ವರ್ಷದ  ಈಗಾಗಲೇ ಐವಿ ಮೇ ಮತ್ತು 2 ವರ್ಷದ ಇಂಡಿ ರೇ ಎಂಬ ಇಬ್ಬರು ಹೆಣ್ಣಮಕ್ಕಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com