ಕೆಎಲ್ ರಾಹುಲ್ ಎಡವಟ್ಟು, ಮನೀಷ್ ಜಾಗೃತೆ, ಹಾಸ್ಯಾತ್ಮಕ ರನ್ಔಟ್, ವಿಡಿಯೋ ನೋಡಿದ್ರೆ ನಗು ಬರುತ್ತೆ!

ಪ್ರವಾಸಿ ವೆಸ್ಟ್ ಇಂಡೀಸ್ ಹಾಗೂ ಟೀಂ ಇಂಡಿಯಾ ನಡುವಿನ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಹಾಸ್ಯಾತ್ಮಕ ರನ್ಔಟ್ ಆಗಿರುವ ಘಟನೆ ನಡೆದಿದೆ...
ವೆಸ್ಟ್ ಇಂಡೀಸ್-ಟೀಂ ಇಂಡಿಯಾ
ವೆಸ್ಟ್ ಇಂಡೀಸ್-ಟೀಂ ಇಂಡಿಯಾ
Updated on
ಪ್ರವಾಸಿ ವೆಸ್ಟ್ ಇಂಡೀಸ್ ಹಾಗೂ ಟೀಂ ಇಂಡಿಯಾ ನಡುವಿನ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಹಾಸ್ಯಾತ್ಮಕ ರನ್ಔಟ್ ಆಗಿರುವ ಘಟನೆ ನಡೆದಿದೆ. 
ಕೋಲ್ಕತ್ತಾ ಈಡೆನ್ ಗಾರ್ಡನ್ ನಲ್ಲಿ ನಡೆಯುತ್ತಿರುವ ಮೊದಲ ಟಿ20 ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡದ ಆಟಗಾರ ಹೋಪ್ ಹಾಸ್ಯಾತ್ಮಕ ರನ್ಔಟ್ ಗೆ ಬಲಿಯಾದ ಬ್ಯಾಟ್ಸ್ ಮನ್. ಹೌದು ಟೀಂ ಇಂಡಿಯಾ ಬೌಲರ್ ಖಲೀಲ್ ಅಹಮದ್ ಬೌಲಿಂಗ್ ನಲ್ಲಿ ಹೋಪ್ ಲೆಗ್ ಸೈಡ್ ನಲ್ಲಿ ಚೆಂಡನ್ನು ಬಾರಿಸಿದರು. ಈ ವೇಳೆ ಕೆಎಲ್ ರಾಹುಲ್ ಚೆಂಡನ್ನು ಹಿಡಿದರು. ಒಂದು ರನ್ ಪಡೆಯುವ ದಾವಾಂತದಲ್ಲಿ ಹೋಪ್ ಮತ್ತು ನಾನ್ ಸ್ಟ್ರೈಕ್ ನಲ್ಲಿದ್ದ ಹೆಟ್ಮರ್ ಓಡಲು ಮುಂದಾದರು. 
ಆದರೆ ಚೆಂಡು ರಾಹುಲ್ ಕೈ ಸೇರಿದ್ದರಿಂದ ಹೋಪ್ ಮತ್ತು ಹೆಟ್ಮರ್ ಗೊಂದಲಕ್ಕೆ ಸಿಲುಕಿ ಇಬ್ಬುರ ನಾನ್-ಸ್ಟ್ರೈಕ್ ಕಡೆ ಓಡಿದರು. ರಾಹುಲ್ ಸುಲಭವಾಗಿ ಚೆಂಡನ್ನು ಕೀಪರ್ ಗೆ ಎಸೆಯಲು ಹೋಗಿ ಮೇಲಕ್ಕೆ ಜೋರಾಗಿ ಎಸೆತದರು. ಆಗ ಕೀಪರ್ ದಿನೇಶ್ ಕಾರ್ತಿಕ್ ಕೈಗೆ ಚೆಂಡು ಸಿಗಲಿಲ್ಲ. ಈ ವೇಳೆ ಕೀಪರ್ ಹಿಂದೆ ಓಡಿ ಬರುತ್ತಿದ್ದ ಮನೀಷ್ ಪಾಂಡೆ ಚೆಂಡನ್ನು ಹಿಡಿದು ರನ್ ಔಟ್ ಮಾಡಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com