ನವದೆಹಲಿ: ಕ್ರಿಕೆಟ್ ದಿಗ್ಗಜ, ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಮಾಡಿರುವ ದಾಖಲೆಗಳನ್ನು ಒಂದೊಂದೆ ಮುರಿಯುತ್ತಿರುವ ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿಗೆ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಒಂದು ಮನವಿ ಮಾಡಿದ್ದಾರೆ.
ಇತ್ತೀಚೆಗಷ್ಟೇ ಸಚಿನ್ ತೆಂಡೂಲ್ಕರ್ ಮಾಡಿದ್ದ ಅತೀ ವೇಗದ 10 ಸಾವಿರ ಏಕದಿನ ರನ್ ಗಳ ದಾಖಲೆ ಸೇರಿದಂತೆ ಹಲವು ದಾಖಲೆಗಳನ್ನು ವಿರಾಟ್ ಕೊಹ್ಲಿ ತಮ್ಮ ಹೆಸರಿಗೆ ಬರೆಯಿಸಿಕೊಂಡಿದ್ದಾರೆ. ಇನ್ನು ಹಲವು ಸಚಿನ್ ದಾಖಲೆಯನ್ನು ಕೊಹ್ಲಿಗೆ ಮುರಿಯುವುದು ಕಷ್ಟವೇನಲ್ಲ. ಆದರೆ ಇದೊಂದು ದಾಖಲೆ ಮುರಿಯುವುದು ಕೊಹ್ಲಿಗೆ ಕಷ್ಟವಾಗಬಹುದು ಎಂದು ಸೆಹ್ವಾಗ್ ಅಭಿಪ್ರಾಯಪಟ್ಟಿದ್ದಾರೆ.
ಟೆಸ್ಟ್ ಕ್ರಿಕೆಟ್ ನಲ್ಲಿ 200 ಪಂದ್ಯಗಳನ್ನು ಆಡಿರುವ ಸಚಿನ್ ತೆಂಡೂಲ್ಕರ್ ಅವರು 15,921 ರನ್ ಪೇರಿಸಿದ್ದಾರೆ. ಈ ದಾಖಲೆ ಮುರಿಯುವುದು ಕೊಹ್ಲಿಗೆ ಕಷ್ಟವಾಗಬಹುದು. ಇದೊಂದು ದಾಖಲೆ ಬಿಟ್ಟು ಉಳಿದೆಲ್ಲವನ್ನೂ ಕೊಹ್ಲಿ ಮುರಿಯಬಹುದು ಎಂದು ಸೆಹ್ವಾಗ್ ಭವಿಷ್ಯ ನುಡಿದಿದ್ದಾರೆ.