ಕ್ರಿಕೆಟ್ ದಿಗ್ಗಜ ಸೆಹ್ವಾಗ್ ಹೆದರಿ, ಹೆದರಿಸಿದ್ದು ಯಾವ ಸ್ಟಾರ್ ಕ್ರಿಕೆಟಿಗರನ್ನು ಗೊತ್ತ?

ಮಾಜಿ ಟೀಂ ಇಂಡಿಯಾ ಸ್ಫೋಟಕ ಬ್ಯಾಟ್ಸ್ ಮನ್ ವೀರೇಂದ್ರ ಸೆಹ್ವಾಗ್ ಅವರು ತಮ್ಮ ಕ್ರಿಕೆಟ್ ಜೀವಮಾನದಲ್ಲಿ ಹೆದರಿದ್ದ ಹಾಗೂ ಹೆದರಿಸಿದ್ದ ಲೆಜೆಂಡ್ ಕ್ರಿಕೆಟಿಗರ ಬಗ್ಗೆ ವಿಶೇಷ...
ವೀರೇಂದ್ರ ಸೆಹ್ವಾಗ್
ವೀರೇಂದ್ರ ಸೆಹ್ವಾಗ್
Updated on
ನವದೆಹಲಿ: ಮಾಜಿ ಟೀಂ ಇಂಡಿಯಾ ಸ್ಫೋಟಕ ಬ್ಯಾಟ್ಸ್ ಮನ್ ವೀರೇಂದ್ರ ಸೆಹ್ವಾಗ್ ಅವರು ತಮ್ಮ ಕ್ರಿಕೆಟ್ ಜೀವಮಾನದಲ್ಲಿ ಹೆದರಿದ್ದ ಹಾಗೂ ಹೆದರಿಸಿದ್ದ ಸ್ಟಾರ್ ಕ್ರಿಕೆಟಿಗರ ಬಗ್ಗೆ ವಿಶೇಷ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. 
ವೀರೇಂದ್ರ ಸೆಹ್ವಾಗ್ ಹಾಗೂ ಪಾಕಿಸ್ತಾನದ ಶಾಹೀದ್ ಆಫ್ರಿದಿ ಕ್ರಿಕೆಟ್ ಲೋಕ ಕಂಡ ದೈತ್ಯ ಕ್ರಿಕೆಟಿಗರು. ಸ್ಫೋಟಿಸಲು ನಿಂತರೆ ಇವರನ್ನು ಕಟ್ಟಿ ಹಾಕುವುದೇ ಎದುರಾಳಿಗಳಿಗೆ ದೊಡ್ಡ ಸವಾಲು. ಅಂತಹ ಕ್ರಿಕೆಟಿಗರು ಇದೀಗ ಫೀಲ್ಡ್ ನಲ್ಲಿ ತಾವು ಎದುರಿಸಿದ ಅತ್ಯಂತ ಕಷ್ಟದ ಬೌಲರ್ ಹಾಗೂ ಬ್ಯಾಟ್ಸ್ ಮನ್ ಯಾರು ಎನ್ನುವ ಸಂಗತಿಯನ್ನು ಬಹಿರಂಗಪಡಿಸಿದ್ದಾರೆ. 
ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಸೆಹ್ವಾಗ್ ನಾನು ಎದುರುಸಿದ ಅತ್ಯಂತ ಕಷ್ಟದ ಬೌಲಿಂಗ್ ಎಂದರೆ ಅದು ಪಾಕ್ ನ ಶೋಯೆಬ್ ಅಖ್ತರ್ ರದ್ದು. ಅವರ ಎಸೆತವನ್ನು ಅಂದಾಜು ಮಾಡಿಕೊಳುವುದೇ ಕಷ್ಟ. ಓವರ್ ನ ಯಾವ ಎಸೆತ ಎಲ್ಲಿಗೆ ಬಡಿಯುತ್ತದೆ ಎಂಬ ಆಂತಕ ಇರುತ್ತಿತ್ತು. 
ತಲೆ, ಶೂ, ಬೌನ್ಸರ್ ಹೀಗೆ ಅವರ ಎಸೆತ ಅರ್ಥ ಮಾಡಿಕೊಳ್ಳುವುದೇ ಕಷ್ಟವಾಗಿತ್ತು. ಅವರ ಎಸೆತವನ್ನು ಬೌಂಡರಿಗೆರೆಯಾಚೆ ಅಟ್ಟುವುದಕ್ಕೂ ಅಷ್ಟೇ ಖುಷಿ ಪಡುತ್ತಿದ್ದೆ ಎಂದು ತಿಳಿಸಿದ್ದಾರೆ. 
ಇದೇ ವಿಷಯದ ಬಗ್ಗೆ ಮಾತನಾಡಿದ ಆಫ್ರಿದಿ ನಾನು ವಿಶ್ವದ ಯಾವ ಬ್ಯಾಟ್ ಮನ್ ಗೂ ಬೌಲಿಂಗ್ ಮಾಡಲು ಹೆದರುತ್ತಿರಲಿಲ್ಲ. ಆದರೆ ವೀರೇಂದ್ರ ಸೆಹ್ವಾಗ್ ಗೆ ಬೌಲಿಂಗ್ ಮಾಡುವಾಗ ತುಂಬಾನೆ ಹೆದರಿಕೊಳ್ಳುತ್ತಿದೆ ಎಂದು ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com