ಬಿರಿಯಾನಿ ಅಂದ್ರೆ ಪಂಚ ಪ್ರಾಣ ಆದ್ರೂ ನಾನ್ ವೆಜ್ ಬಿಟ್ಟು ಸಸ್ಯಾಹಾರಿಯಾದ ಟೀಂ ಇಂಡಿಯಾ ಕ್ಯಾಪ್ಟನ್ ಕೊಹ್ಲಿ!

ಗೋ ವೆಜನ್ ಅಥವಾ ಗೋ ವೆಜಿಟೇರಿಯನ್ ಎಂಬ ಆಂದೋಲನ ವಿಶ್ವವ್ಯಾಪಿಯಾಗುತ್ತಿದೆ. ಫಿಟ್ನೆಸ್ ಕಾರಣದಿಂದಾಗಿ ಪ್ರಮುಖವಾಗಿ ಕ್ರೀಡಾಪಟುಗಳು ಸಸ್ಯಹಾರಿಗಳಾಗಿ ಮಾರ್ಪಾಡಾಗುತ್ತಿದ್ದು,
ವಿರಾಟ್ ಕೊಹ್ಲಿ
ವಿರಾಟ್ ಕೊಹ್ಲಿ
ನವದೆಹಲಿ: 'ಗೋ ವೆಜನ್' ಅಥವಾ ಗೋ ವೆಜಿಟೇರಿಯನ್ ಎಂಬ ಆಂದೋಲನ ವಿಶ್ವವ್ಯಾಪಿಯಾಗುತ್ತಿದೆ. ಫಿಟ್ನೆಸ್ ಕಾರಣದಿಂದಾಗಿ ಪ್ರಮುಖವಾಗಿ ಕ್ರೀಡಾಪಟುಗಳು ಸಸ್ಯಹಾರಿಗಳಾಗಿ ಮಾರ್ಪಾಡಾಗುತ್ತಿದ್ದು, ಈ ಪಟ್ಟಿಗೆ ಈಗ ಟೀಂ ಇಂಡಿಯಾ ನಾಯಕ ಕೊಹ್ಲಿ ಸಹ ಸೇರ್ಪಡೆಗೊಂಡಿದ್ದಾರೆ. 
ಬಿರಿಯಾನಿ ಅಂದ್ರೆ ವಿರಾಟ್ ಕೊಹ್ಲಿಗೆ ಅಚ್ಚುಮೆಚ್ಚಿನ ಆಹಾರ. ಆದರೂ ಕೊಹ್ಲಿ ಫಿಟ್ನೆಸ್ ಕಾರಣದಿಂದಾಗಿ ಸಸ್ಯಹಾರಿಯಾಗಿದ್ದಾರೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಪ್ರಕಟಿಸಿದೆ. ಕಳೆದ 4 ತಿಂಗಳುಗಳಿಂದ ಸಸ್ಯಹಾರವನ್ನು ಹೆಚ್ಚು ಸೇವಿಸುತ್ತಿದ್ದು, ತಮ್ಮ ಫಿಟ್ನೆಸ್ ಹಾಗೂ ಕ್ರಿಕೆಟ್ ವೃತ್ತಿ ಜೀವನಕ್ಕೆ ಇದು ಹೆಚ್ಚಿನ ರೀತಿಯಲ್ಲಿ ಸಹಕಾರಿಯಾಗಿದೆ ಎಂದು ಕೊಹ್ಲಿ ಹೇಳಿರುವುದನ್ನೂ ಟೈಮ್ಸ್ ಆಫ್ ಇಂಡಿಯಾ ಪ್ರಕಟಿಸಿದೆ. 
ಹೆಚ್ಚು ಪ್ರೊಟೀನ್ ಅಂಶವುಳ್ಳ ಆಹಾರವನ್ನು ಕೊಹ್ಲಿ ಸೇವಿಸುತ್ತಿದ್ದು, ತರಕಾರಿ ಹಾಗೂ ಸೊಯಾವನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವಿಸುತ್ತಿದ್ದಾರೆ. ಸಸ್ಯಹಾರಿಯಾದಾಗಿನಿಂದ ಕೊಹ್ಲಿಯ ಸ್ವಭಾವದಲ್ಲೂ ಬದಲಾವಣೆಯಾಗಿದೆ ಎಂದು ಹೇಳಲಾಗುತ್ತಿದೆ. ಕೊಹ್ಲಿ ಜೊತೆಗೇ ಪತ್ನಿ ಅನುಷ್ಕಾ ಶರ್ಮಾ ಸಹ ಸಸ್ಯಹಾರಿಯಾಗಲು ನಿರ್ಧರಿಸಿದ್ದು ಗಮನಾರ್ಹ ಅಂಶ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com