ಮುಂಬೈ: ಭಾರತ-ವೆಸ್ಟ್ ಇಂಡೀಸ್ ವಿರುದ್ಧ ನಾಲ್ಕನೇ ಏಕದಿನ ಪಂದ್ಯ ಮುಂಬೈನಲ್ಲಿ ಪ್ರಾರಂಭವಾಗಿದೆ. ಟಾಸ್ ಗೆದ್ದ ಕೊಹ್ಲಿ ಪಡೆ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ..ಕಳೆದ ಮೂರು ಪ<ದ್ಯದಲ್ಲಿ 1-1 ಸಮಬಲ ಸಾಧಿಸಿರುವ ಎರಡೂ ತಂಡಗಳಿಗೆ ಇದು ಪ್ರತಿಷ್ಠಿತ ಪಂದ್ಯವಾಗಿದೆ. .ಟೀಂ ಇಂಡಿಯಾದಲ್ಲಿ ಚಾಹಲ್ ಹಾಗೂ ಪಂತ್ ಬದಲಿಗೆ ಜಡೇಜಾ ಹಾಗೂ ಕೇದಾರ್ ಜಾಧವ್ ಸೇರ್ಪಡೆಯಾಗಿದ್ದಾರೆ..ಪ್ರಾರಂಭಿಕ ಆಟಗಾರರಾದ ರೋಹಿತ್ ಶರ್ಮಾ ಹಾಗೂ ಶಿಖರ್ ಧವನ್ 50 ರನ್ ಜತೆಯಾಟವಾಡಿದ್ದರು. ಶಿಖರ್ ಧವನ್ 40 ಬಾಲ್ ಗಳಲ್ಲಿ 38 ರನ್ ಗಳಿಸಿ ಕೀಮೋ ಪೌಲ್ ಗೆ ವಿಕೆಟ್ ಒಪ್ಪಿಸಿದ್ದಾರೆ..ಇತ್ತೀಚಿನ ವರದಿಯಂತೆ ಭಾರತ 15 ಓವರ್ ಗಳಲ್ಲಿ 93/1 ರನ್ ಗಳಿಸಿದೆ..Follow KannadaPrabha channel on WhatsApp Subscribe to KannadaPrabha YouTube Channel and watch Videos Download the KannadaPrabha News app to follow the latest news updates Subscribe and Receive exclusive content and updates on your favorite topics