ಕ್ರಿಕೆಟ್ ನ ಹೀಗೂ ಆಡ್ತಾರಾ..? ವಿಡಿಯೋ ನೋಡಿ ನಕ್ಕು ನಕ್ಕು ಸುಸ್ತಾಗ್ತೀರ..!

ಭಾರತದ ರಾಷ್ಟ್ರೀಯ ಕ್ರೀಡೆ ಹಾಕಿಯಾದರೂ, ಕ್ರಿಕೆಟ್ ಅನ್ನು ಧರ್ಮದಂತೆ ಕಾಣುತ್ತಾರೆ. ಭಾರತದಲ್ಲಿ ಕ್ರಿಕೆಟ್ ಎಷ್ಟು ಜನಪ್ರಿಯವೆಂದರೆ ಕ್ರಿಕೆಟಿಗರನ್ನು ದೇವರಂತೆ ಪ್ರೀತಿಸುತ್ತಾರೆ. ಇದೇ ಕ್ರಿಕೆಟ್ ನ ಗಲ್ಲಿ ಕ್ರಿಕೆಟ್ ನ ಮಾದರಿಯೊಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಹೊಸ ಮಾದರಿಯ ಗಲ್ಲಿ ಕ್ರಿಕೆಟ್
ಹೊಸ ಮಾದರಿಯ ಗಲ್ಲಿ ಕ್ರಿಕೆಟ್
ನವದೆಹಲಿ: ಭಾರತದ ರಾಷ್ಟ್ರೀಯ ಕ್ರೀಡೆ ಹಾಕಿಯಾದರೂ, ಕ್ರಿಕೆಟ್ ಅನ್ನು ಧರ್ಮದಂತೆ ಕಾಣುತ್ತಾರೆ. ಭಾರತದಲ್ಲಿ ಕ್ರಿಕೆಟ್ ಎಷ್ಟು ಜನಪ್ರಿಯವೆಂದರೆ ಕ್ರಿಕೆಟಿಗರನ್ನು ದೇವರಂತೆ ಪ್ರೀತಿಸುತ್ತಾರೆ. ಇದೇ ಕ್ರಿಕೆಟ್ ನ ಗಲ್ಲಿ ಕ್ರಿಕೆಟ್ ನ ಮಾದರಿಯೊಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಸಾಮಾನ್ಯವಾಗಿ ಕ್ರಿಕೆಟ್ ನಲ್ಲಿ ಬ್ಯಾಟ್ ಮತ್ತು ಬಾಲ್ ಇಲ್ಲದೇ ಕ್ರಿಕೆಟ್ ಅಸಾಧ್ಯ. ಆದರೆ ಭಾರತದಂತಹ ರಾಷ್ಟ್ರಗಳಲ್ಲಿ ಬ್ಯಾಟ್ ಮತ್ತು ಬಾಲ್ ಇಲ್ಲದಿದ್ದರೂ ಕ್ರಿಕೆಟ್ ಆಡಬಹುದು ಎಂದು ಇಲ್ಲೊಂದು ಗಲ್ಲಿ ಕ್ರಿಕೆಟ್ ತಂಡ ಸಾಬೀತು ಮಾಡಿದೆ.
ಬಾಲ್ ಇಲ್ಲದೇ ಓರ್ವ ಪುಟ್ಟ ಬಾಲಕನನ್ನೇ ಬಾಲ್ ಆಗಿ ಬಳಿಸಿದ್ದು, ಬ್ಯಾಟ್ಸಮನ್ ಓರ್ವ ಇದೇ ಬಾಲಕನ ಚಾಕಚಕ್ಯತೆಯಿಂದಾಗಿ ಔಟ್ ಆದ ಪರಿ ನಗು ತರಿಸುತ್ತದೆ. ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ಭಾರಿ ವೈರಲ್ ಆಗುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com