ಒಂದಲ್ಲ, ಎರಡಲ್ಲ ಹ್ಯಾಟ್ರಿಕ್ ಕ್ಯಾಚ್ ಮಿಸ್, ತಲೆ ಚಚ್ಚಿಕೊಂಡ ವೇಗಿ, ವಿಡಿಯೋ ವೈರಲ್!

2019ರ ಐಪಿಎಲ್ ನಲ್ಲಿ ಅತೀ ಹೆಚ್ಚು ಕ್ಯಾಚ್ ಬಿಟ್ಟಿರುವ ತಂಡ ಎಂದರೆ ಅದು ಆರ್‌ಸಿಬಿ ಎಂದು ಹೇಳಬಹುದೇನೋ. ಅದೇ ರೀತಿ ಇಲ್ಲೊಬ್ಬ ಆಟಗಾರ ಒಂದೇ ಪಂದ್ಯದಲ್ಲಿ ಒಂದಲ್ಲ, ಎರಡಲ್ಲ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on: 
ಜೈಪುರ: 2019ರ ಐಪಿಎಲ್ ನಲ್ಲಿ ಅತೀ ಹೆಚ್ಚು ಕ್ಯಾಚ್ ಬಿಟ್ಟಿರುವ ತಂಡ ಎಂದರೆ ಅದು ಆರ್‌ಸಿಬಿ ಎಂದು ಹೇಳಬಹುದೇನೋ. ಅದೇ ರೀತಿ ಇಲ್ಲೊಬ್ಬ ಆಟಗಾರ ಒಂದೇ ಪಂದ್ಯದಲ್ಲಿ ಒಂದಲ್ಲ, ಎರಡಲ್ಲ ಹ್ಯಾಟ್ರಿಕ್ ಕ್ಯಾಚ್ ಬಿಟ್ಟಿರುವ ವಿಡಿಯೋ ಇದೀಗ ವೈರಲ್ ಆಗಿದೆ.
ರಾಜಸ್ತಾನ ರಾಯಲ್ಸ್ ತಂಡದ ಆಲ್ರೌಂಡರ್ ಜೋಫ್ರಾ ಆರ್ಚರ್ ಒಟ್ಟಾರೆ ಮೂರು ಕ್ಯಾಚ್ ಗಳನ್ನು ಮಿಸ್ ಮಾಡಿದ್ದಾರೆ. ಆದರೂ ರಾಜಸ್ತಾನ 5 ವಿಕೆಟ್ ಗಳಿಂದ ಪಂದ್ಯ ಗೆದ್ದಿದೆ. 
ಮೊದಲು ಬ್ಯಾಟಿಂಗ್ ಮಾಡಿದ್ದ ಮುಂಬೈ ಇಂಡಿಯನ್ಸ್ ತಂಡ ನಿಗದಿತ ಓವರ್ ನಲ್ಲಿ 5 ವಿಕೆಟ್ ನಷ್ಟಕ್ಕೆ 161 ರನ್ ಪೇರಿಸಿತ್ತು. 162 ರನ್ ಗಳ ಗುರಿ ಬೆನ್ನಟ್ಟಿದ ರಾಜಸ್ತಾನ ತಂಡ ಇನ್ನು 5 ಎಸೆತ ಬಾಕಿ ಇರುವಂತೆ 5 ವಿಕೆಟ್ ನಷ್ಟಕ್ಕೆ 162 ರನ್ ಪೇರಿಸಿ ಗೆಲುವಿನ ನಗೆ ಬೀರಿತು.
ಪಂದ್ಯದ ಆರಂಭದಲ್ಲೇ ಮುಂಬೈನ ಕ್ವಿಂಟನ್ ಡಿ ಕಾಕ್ ಶ್ರೇಯಸ್ ಗೋಪಾಲ್ ಎಸೆತದಲ್ಲಿ ಆರ್ಚರ್ ಗೆ ಕ್ಯಾಚ್ ನೀಡಿದ್ದರು. ಜೀವದಾನ ಪಡೆದ ಡಿಕಾಕ್ ಭರ್ಜರಿ 65 ರನ್ ಪೇರಿಸಿದರು.
ಇದಾದ ಬಳಿಕ ಜೈವೇದ್ ಉನಾದ್ಕಟ್ ದಾಳಿಯಲ್ಲಿ ಹಾರ್ದಿಕ್ ಪಾಂಡ್ಯ ಅವರ ಎರಡು ಕ್ಯಾಚ್ ಗಳನ್ನು ಕೈಚೆಲ್ಲಿದರು. ಇದರಿಂದ ಬೇಸರಗೊಂಡ ಆರ್ಚರ್ ತನ್ನ ಆಟಕ್ಕೆ ತಾನೇ ಬೇರಸಗೊಂಡರು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com