ಪಾರ್ಥಿವ್ ಸ್ಫೋಟಕ ಬ್ಯಾಟಿಂಗ್, ಚೆನ್ನೈಗೆ 161 ರನ್ ಗುರಿ ನೀಡಿದ ಆರ್‌ಸಿಬಿ!

ಚೆನ್ನೈ ವಿರುದ್ಧದ ಸತತ ಸೋಲು ಕಂಡಿರುವ ಆರ್ಸಿಬಿ ತಂಡ ಇದೀಗ ಬೆಂಗಳೂರಿನಲ್ಲಿ ನಡೆಯುತ್ತಿರುವ ಐಪಿಎಲ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದು 161 ರನ್ ಪೇರಿಸಿದೆ.
ಸಿಎಸ್ಕೆ-ಆರ್ಸಿಬಿ
ಸಿಎಸ್ಕೆ-ಆರ್ಸಿಬಿ
Updated on: 
ಬೆಂಗಳೂರು: ಚೆನ್ನೈ ವಿರುದ್ಧದ ಸತತ ಸೋಲು ಕಂಡಿರುವ ಆರ್ಸಿಬಿ ತಂಡ ಇದೀಗ ಬೆಂಗಳೂರಿನಲ್ಲಿ ನಡೆಯುತ್ತಿರುವ ಐಪಿಎಲ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದು 161 ರನ್ ಪೇರಿಸಿದೆ.
ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಐಪಿಎಲ್ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಆರ್‌ಸಿಬಿ ತಂಡ ನಿಗದಿತ ಓವರ್ ನಲ್ಲಿ 7 ವಿಕೆಟ್ ನಷ್ಟಕ್ಕೆ 161 ರನ್ ಪೇರಿಸಿದೆ. ಇದರೊಂದಿಗೆ ಚೆನ್ನೈಗೆ 162 ರನ್ ಗುರಿ ನೀಡಿದೆ. 
ಆರ್‌ಸಿಬಿ ಪರ ಪಾರ್ಥಿವ್ ಪಟೇಲ್ 53, ಎಬಿ ಡಿವಿಲಿಯರ್ಸ್ 25, ಮೊಹಿನ್ ಅಲಿ 26 ರನ್ ಪೇರಿಸಿದ್ದಾರೆ.
ಚೆನ್ನೈ ಪರ ಬೌಲಿಂಗ್ ನಲ್ಲಿಲ ಚಹಾರ್, ಜಡೇಜಾ ಹಾಗೂ ಡ್ವೈನ್ ಬ್ರಾವೋ ತಲಾ 2 ವಿಕೆಟ್ ಪಡೆದಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com