ನ್ಯೂಜಿಲ್ಯಾಂಡ್ ಕ್ಲಬ್ ಪರ ಆಡುತ್ತಿದ್ದ ಭಾರತೀಯ ಮೂಲದ ಕ್ರಿಕೆಟಿಗ ಹರೀಶ್ ಗಂಗಾಧರನ್ ಮೈದಾನದಲ್ಲೇ ಕುಸಿದು ಸಾವನ್ನಪ್ಪಿದ್ದು, ನ್ಯೂಜಿಲೆಂಡ್ ನ ಡ್ಯುನೆಡಿನ್ನಲ್ಲಿ ನಡೆಯುತ್ತಿದ್ದ ಪಂದ್ಯದಲ್ಲಿ ಈ ಅವಘಡ ಸಂಭವಿಸಿದೆ. ಹರೀಶ್ ಕಿವೀಸ್ನ ಗ್ರೀನ್ ಐಲ್ಯಾಂಡ್ ಕ್ರಿಕೆಟ್ ಕ್ಲಬ್ ತಂಡದ ಆಟಗಾರರಾಗಿದ್ದು, ಕೆಲ ವರ್ಷಗಳಿಂದ ಈ ತಂಡವನ್ನು ಪ್ರತಿನಿಧಿಸುತ್ತಿದ್ದರು.