ಟೀಂ ಇಂಡಿಯಾ ಪ್ರವಾಸ: ಕೊಹ್ಲಿ ಪಡೆ ವಿರುದ್ಧ ಸೆಣೆಸಲು ಆಸ್ಟ್ರೇಲಿಯಾ ತಂಡ ಪ್ರಕಟ!

ವಿಶ್ವಕಪ್ ಟೂರ್ನಿಗೂ ಮುನ್ನ ಪೂರ್ವಭಾವಿಯಾಗಿ ಫೆಬ್ರವರಿ 24ರಿಂದ ಆರಂಭವಾಗಲಿರುವ ಭಾರತ-ಆಸ್ಟ್ರೇಲಿಯಾ ನಡುವಿನ ಟಿ20 ಹಾಗೂ ಏಕದಿನ ಸರಣಿ ಉಭಯ ತಂಡಗಳಿಗೂ ಮುಖ್ಯವಾಗಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on: 
ಮೆಲ್ಬರ್ನ್: ವಿಶ್ವಕಪ್ ಟೂರ್ನಿಗೂ ಮುನ್ನ ಪೂರ್ವಭಾವಿಯಾಗಿ ಫೆಬ್ರವರಿ 24ರಿಂದ ಆರಂಭವಾಗಲಿರುವ ಭಾರತ-ಆಸ್ಟ್ರೇಲಿಯಾ ನಡುವಿನ ಟಿ20 ಹಾಗೂ ಏಕದಿನ ಸರಣಿ ಉಭಯ ತಂಡಗಳಿಗೂ ಮುಖ್ಯವಾಗಿದೆ. ಇದಕ್ಕಾಗಿ ಆಸ್ಟ್ರೇಲಿಯಾ ತಂಡವನ್ನು ಪ್ರಕಟಿಸಿದ್ದು ವೇಗಿ ಮಿಚೆಲ್ ಸ್ಟಾರ್ಕ್ ಸರಣಿ ಹೊರಬಿದ್ದಿದ್ದಾರೆ.
ಭಾರತ ಆಸ್ಟ್ರೇಲಿಯಾ ಪ್ರವಾಸ ಕೈಗೊಂಡಿದ್ದು ಅಲ್ಲಿ ಏಕದಿನ ಸರಣಿ ಹಾಗೂ ಟೆಸ್ಟ್ ಪಂದ್ಯ ಗೆಲ್ಲುವ ಮೂಲಕ ಐತಿಹಾಸಿಕ ಸಾಧನೆ ಮಾಡಿತ್ತು. ಇದೀಗ ಆಸ್ಟ್ರೇಲಿಯಾ ಭಾರತ ಪ್ರವಾಸ ಕೈಗೊಳ್ಳುತ್ತಿದ್ದು ಉಭಯ ತಂಡಗಳಿಗೂ ಈ ಸರಣಿ ತುಂಬ ಮುಖ್ಯದ್ದಾಗಿದೆ.
ಆಸ್ಟ್ರೇಲಿಯಾ ಟಿ20/ಏಕದಿನ ತಂಡ
ಆರೋನ್ ಪಿಂಚ್, ಪ್ಯಾಟ್ ಕಮಿನ್ಸ್, ಅಲೆಕ್ಸ್ ಕರ್ರಿ, ಜೇಸನ್ ಬೆಹ್ರೆನ್ಡಾರ್ಫ್, ನಾಥನ್ ಕೌಲ್ಟರ್-ನೈಲ್, ಪೀಟರ್ ಹ್ಯಾಂಡ್ಸ್ಕಾಂಬ್, ಉಸ್ಮಾನ್ ಖವಾಜಾ, ನಾಥನ್ ಲಿಯಾನ್, ಶಾನ್ ಮಾರ್ಷ್, ಗ್ಲೆನ್ ಮ್ಯಾಕ್ಸ್ವೆಲ್, ಜೀಯೆ ರಿಚರ್ಡ್ಸನ್, ಕೇನ್ ರಿಚಾರ್ಡ್ಸನ್, ಡಿ ಆರ್ಕಿ ಶಾರ್ಟ್, ಮಾರ್ಕಸ್ ಸ್ಟೋಯಿನ್ಸ್, ಆಷ್ಟನ್ ಟರ್ನರ್, ಆಡಮ್ ಜಂಪಾ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com