ದ್ವಿತೀಯ ಟಿ20: ಟಾಸ್ ಗೆದ್ದ ಅಸೀಸ್ ಫೀಲ್ಡಿಂಗ್ ಆಯ್ಕೆ

ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭಾರತ- ಆಸ್ಟ್ರೇಲಿಯಾಗಳ ನಡುವೆ ದ್ವಿತೀಯ ಟಿ-20 ಪ್ರಾರಂಭವಾಗಿದ್ದು ಭಾರತ ವಿರುದ್ಧ ಟಾಸ್ ಗೆದ್ದಿರುವ ಅಸೀಸ್ ಪಡೆ....
ದ್ವಿತೀಯ ಟಿ-20: ಟಾಸ್ ಗೆದ್ದ ಅಸೀಸ್ ಫೀಲ್ಡಿಂಗ್ ಆಯ್ಕೆ
ದ್ವಿತೀಯ ಟಿ-20: ಟಾಸ್ ಗೆದ್ದ ಅಸೀಸ್ ಫೀಲ್ಡಿಂಗ್ ಆಯ್ಕೆ
ಬೆಂಗಳೂರು:ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭಾರತ- ಆಸ್ಟ್ರೇಲಿಯಾಗಳ ನಡುವೆ ದ್ವಿತೀಯ ಟಿ-20 ಪ್ರಾರಂಭವಾಗಿದ್ದು ಭಾರತ ವಿರುದ್ಧ ಟಾಸ್ ಗೆದ್ದಿರುವ ಅಸೀಸ್ ಪಡೆ ಫೀಲ್ಡಿಂಗ್ ಆಯ್ದುಕೊಂಡಿದೆ.

ಆಸ್ಟ್ರೇಲಿಯಾ ನಾಯಕ ಆ್ಯರೋನ್ ಫಿಂಚ್ ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿದ್ದಾರೆ.

ಟೀಂ ಇಂಡಿಯಾದ ಪ್ರಾರಂಭಿಕ ಆಟಗಾರ ರೋಹಿತ್ ಶರ್ಮಾ, ಮಯಾಂಕ್ ಮಾರ್ಕಂಡೆ ಹಾಗೂ ಉಮೇಶ್ ಯಾದವ್  ಈ ಬಾರಿ ವಿಶ್ರಾಂತಿ ಪಡೆಯಲಿದ್ದಾರೆ. ರೋಹಿತ್ ಸ್ಥಾನದಲಿ ಶಿಖರ್ ಧವನ್ ಆಡಿದರೆ ಮಯಾಂಕ್ ಹಾಗೂ ಯಾದವ್ ಬದಲಿಗೆ ವಿಜಯ್ ಶಂಕರ್ ಹಾಗೂ ಸಿದ್ಧಾರ್ಥ್ ಕೌಲ್ ಫೀಲ್ಡಿಗಿಳಿಯಲಿದ್ದಾರೆ.
ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳ ವಿವರ ಹೀಗಿದೆ-

ಭಾರತ: ಶಿಖರ್ ಧವನ್, ಲೋಕೇಶ್ ರಾಹುಲ್, ವಿರಾಟ್ ಕೊಹ್ಲಿ (ನಾಯಕ)ರಿಶಬ್ ಪಂತ್, ಎಂಎಸ್ ಧೋನಿ,  ದಿನೇಶ್ ಕಾರ್ತಿಕ್, ವಿಜಯ್ ಶಂಕರ್, ಕೆ.ಪಾಂಡ್ಯ, ಯುಜ್ವೆಂದ್ರ ಚಾಹಲ್, ಜಸ್ಪ್ರಿತ್ ಬುಮ್ರ, ಸಿದ್ರ್ಥ್ ಕೌಲ್

ಆಸ್ಟ್ರೇಲಿಯಾ: ಡಿ ಅರ್ಚಿ ಶಾರ್ಟ್, ಮಾರ್ಕಸ್ ಸ್ಟೊಯಿನಿಸ್, ಆರನ್ ಫಿಂಚ್ (ನಾಯಕ), ಮ್ಯಾಕ್ಸ್ವೆಲ್, ಪೀಟರ್ ಹ್ಯಾಂಡ್ಸ್ಕಾಂಬ್, ಆಷ್ಟನ್ ಟರ್ನರ್, ನಾಥನ್ ಕೌಲ್ಟರ್-ನೈಲ್, ಪ್ಯಾಟ್ ಕಮ್ಮಿನ್ಸ್, ಜೀಯೆ ರಿಚರ್ಡ್ಸನ್, ಜಾಸನ್ ಬೆಹೆರೆನ್ಡಾಫ್, ಆಡಮ್ ಜಂಪಾ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com