19 ವರ್ಷಗಳ ಕ್ರಿಕೆಟ್ ವೃತ್ತಿ ಬದುಕಿಗೆ ದಕ್ಷಿಣ ಆಫ್ರಿಕಾದ ಜೋಹಾನ್ ಬೋಥಾ ನಿವೃತ್ತಿ ಘೋಷಣೆ!

ದಕ್ಷಿಣ ಆಫ್ರಿಕಾದ ಆಲ್‌ ರೌಂಡರ್ ಜೋಹನ್ ಬೋಥಾ ಅಂತಾರಾಷ್ಟ್ರೀಯ ಎಲ್ಲಾ ಮಾದರಿಯ ಕ್ರಿಕೆಟ್ ಗೆ ತಕ್ಷಣದಿಂದಲೇ ನಿವೃತ್ತಿ ಘೋಷಿಸಿದ್ದಾರೆ.
ಜೋಹಾನ್ ಬೋಥಾ
ಜೋಹಾನ್ ಬೋಥಾ
Updated on: 
ಸಿಡ್ನಿ: ದಕ್ಷಿಣ ಆಫ್ರಿಕಾದ ಆಲ್‌ ರೌಂಡರ್ ಜೋಹನ್ ಬೋಥಾ ಅಂತಾರಾಷ್ಟ್ರೀಯ ಎಲ್ಲಾ ಮಾದರಿಯ ಕ್ರಿಕೆಟ್ ಗೆ ತಕ್ಷಣದಿಂದಲೇ ನಿವೃತ್ತಿ ಘೋಷಿಸಿದ್ದಾರೆ.
ಆಸ್ಟ್ರೇಲಿಯಾ ಬಿಗ್ ಬ್ಯಾಶ್ ಟೂರ್ನಿಯ ಸಿಡ್ನಿ ಕ್ರಿಕೆಟ್‌ ಗ್ರೌಂಡ್‌ನಲ್ಲಿ ಬುಧವಾರ ರಾತ್ರಿ ನಡೆದ ಪಂದ್ಯದಲ್ಲಿ ಸಿಡ್ನಿ ಸಿಕ್ಸರ್ಸ್ ಎದುರು ಹೋಬರ್ಟ್‌ ಹರಿಕೇನ್ಸ್ ಸೋತ ನಂತರ 36 ವರ್ಷದ ಬೋತಾ ನಿವೃತ್ತಿ ಘೋಷಣೆ ಮಾಡಿದ್ದಾರೆ.
ಮಧ್ಯಮ ಕ್ರಮಾಂಕದ ಆಟಗಾರನಾಗಿ ಕ್ರೀಡಾ ವೃತ್ತಿ ಜೀವನ ಆರಂಭಿಸಿದ ಅವರು ನಂತರ ಆಫ್‌ ಸ್ಪಿನ್ನರ್ ಆದರು. ಅವರ 19 ವರ್ಷಗಳ ಕ್ರೀಡಾ ಪಯಣ ಆಸಕ್ತಿಕರವಾಗಿದೆ. ದಕ್ಷಿಣ ಆಫ್ರಿಕಾದ ಪರವಾಗಿ 5 ಬಾರಿ ಪ್ರತಿನಿಧಿಸಿ 17 ವಿಕೆಟ್ ಪಡೆದಿದ್ದರು.
ವೆಸ್ಟ್ ಇಂಡೀಸ್ ಮತ್ತು ನ್ಯೂಜಿಲೆಂಡ್ ವಿರುದ್ಧ 2010 ಮತ್ತು 2012ರಲ್ಲಿ ರೋಚಕ ಒಂದು ರನ್ ಹಾಗೂ ಮೂರು ರನ್‌ಗಳಲ್ಲಿ ದಕ್ಷಿಣ ಆಫ್ರಿಕಾ ಜಯ ಗಳಿಸಿದ ಪಂದ್ಯಗಳಲ್ಲಿ ಇವರು ಅದ್ಭುತ ಪ್ರದರ್ಶನ ನೀಡಿದ್ದರು. 78 ಏಕದಿನ ಪಂದ್ಯಗಳಲ್ಲಿ ಅವರು 609 ರನ್ ಗಳಿಸಿದ್ದರು. ಟಿ 20 ಪಂದ್ಯಗಳಲ್ಲಿ ಸುಮಾರು 500 ವಿಕೆಟ್ ಕಬಳಿಸಿದ್ದರು. ಕಡೆಯದಾಗಿ 2012ರಲ್ಲಿ ವಿಶ್ವ ಟಿ20 ಕ್ರಿಕೆಟ್ ಪಂದ್ಯಾವಳಿಯಲ್ಲಿ ಆಡಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com