ಪಾಂಡ್ಯ ಬೌಲಿಂಗ್ ನಲ್ಲಿ ರಾಸ್ ಟೇಲರ್ ಹೊಡೆದ ಚೆಂಡನ್ನು ಮಿಡ್ ಆಫ್ ನಲ್ಲಿದ್ದ ಶಿಖರ್ ಧವನ್ ತಡೆದಿದ್ದರು. ಆದರೆ ಚೆಂಡನ್ನು ವಿಕೆಟ್ ಕೀಪರ್ ದಿನೇಶ್ ಕಾರ್ತಿಕ್ ಗೆ ಎಸೆಯುವ ಬದಲು ಎಲ್ಲೊಲ್ಲೋ ಎಸೆದಿದ್ದರು. ಇದರಿಂ ಕ್ಯಾಪ್ಟನ್ ಕೇನ್ ವಿಲಿಯಮ್ಸನ್ ಮತ್ತು ರಾಸ್ ಟೇಲರ್ ಸುಲಭವಾಗಿ ರನ್ ಕದ್ದರು. ಇದರಿಂದ ತಾಳ್ಮೆ ಕಳೆದುಕೊಂಡ ಹಾರ್ದಿಕ್ ಪಾಂಡ್ಯ ವಾಟ್ ಯಾರ್ ಎಂದು ಸಿಟ್ಟಿನಿಂದ ಶಿಖರ್ ಧವನ್ ರತ್ತ ತಿರುಗಿ ಉದ್ಘರಿಸಿದರು. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.