ಮತ್ತೆ ದಾಖಲೆ ಬರೆದ ವಿರಾಟ್ ಕೊಹ್ಲಿ, ಈ ಬಾರಿ ಬ್ಯಾಟ್ ನಿಂದಲ್ಲ!

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ತಾವಾಡುವ ಪ್ರತೀ ಪಂದ್ಯದಲ್ಲೂ ಒಂದಲ್ಲ ಒಂದು ದಾಖಲೆ ನಿರ್ಮಾಣ ಮಾಡುತ್ತಿದ್ದು, ಇದೀಗ ಮತ್ತೊಂದು ದಾಖಲೆ ಅವರ ಹೆಸರಿಗೆ ಸೇರ್ಪಡೆಯಾಗಿದೆ.
ಮತ್ತೆ ದಾಖಲೆ ಬರೆದ ವಿರಾಟ್ ಕೊಹ್ಲಿ
ಮತ್ತೆ ದಾಖಲೆ ಬರೆದ ವಿರಾಟ್ ಕೊಹ್ಲಿ
Updated on: 
ಬೇ ಓವಲ್: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ತಾವಾಡುವ ಪ್ರತೀ ಪಂದ್ಯದಲ್ಲೂ ಒಂದಲ್ಲ ಒಂದು ದಾಖಲೆ ನಿರ್ಮಾಣ ಮಾಡುತ್ತಿದ್ದು, ಇದೀಗ ಮತ್ತೊಂದು ದಾಖಲೆ ಅವರ ಹೆಸರಿಗೆ ಸೇರ್ಪಡೆಯಾಗಿದೆ.
ಹೌದು.. ನ್ಯೂಜಿಲೆಂಡ್ ವಿರುದ್ಧ 3ನೇ ಏಕದಿನ ಪಂದ್ಯದಲ್ಲೂ ಭಾರತ ತಂಡ 7 ವಿಕೆಟ್ ಗಳ ಭರ್ಜರಿ ಜಯ ಸಾಧಿಸಿದ್ದು, ಆ ಮೂಲಕ 5 ಪಂದ್ಯಗಳ ಏಕದಿನ ಸರಣಿಯನ್ನು ಇನ್ನೂ 2 ರ ಪಂದ್ಯ ಬಾಕಿ ಇರುವಂತೆಯೇ 3-0 ಅಂತರದಲ್ಲಿ ಜಯಸಿದೆ. ಆ ಮೂಲಕ ಆಸ್ಚ್ರೇಲಿಯಾ ಪ್ರವಾಸದ ಬಳಿಕ ನ್ಯೂಜಿಲೆಂಡ್ ನಲ್ಲೂ ತನ್ನ ಜೈತ್ರ ಯಾತ್ರೆ ಮುಂದುವರೆಸಿದೆ.
ಇನ್ನು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಈ ಗೆಲುವಿನ ಮೂಲಕ ಮತ್ತೊಂದು ಮಹತ್ವದ ದಾಖಲೆ ನಿರ್ಮಾಣ ಮಾಡಿದ್ದು, ಅತೀ ಹೆಚ್ಚು ಏಕದಿನ ಪಂದ್ಯ ಗೆದ್ದ ನಾಯಕರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಕೊಹ್ಲಿ ಈ ವರೆಗೂ 63 ಏಕದಿನ ಪಂದ್ಯಗಳಲ್ಲಿ ಟೀಂ ಇಂಡಿಯಾ ಸಾರಥ್ಯ ವಹಿಸಿದ್ದು, ಈ ಪೈಕಿ ಬರೊಬ್ಬರಿ 47 ಪಂದ್ಯಗಳಲ್ಲಿ ತಂಡ ಜಯ ಗಳಿಸಿದೆ. ಆ ಮೂಲಕ ಕೊಹ್ಲಿ ಜಿಂಬಾಂಬ್ವೆ ಹಿರಿಯ ಆಟಗಾರ ಚಿಗಂಬುರಾ (62 ಪಂದ್ಯ, 18 ಗೆಲುವು) ಪಾಕಿಸ್ತಾನದ ಮಾಜಿ ಆಟಗಾರ ಜಾವೆದ್ ಮಿಯಾಂದಾದ್ (62 ಪಂದ್ಯ, 26 ಗೆಲುವು) ಮತ್ತು ನ್ಯೂಜಿಲೆಂಡ್ ನ ಮೆಕ್ಕಲಮ್ (62 ಪಂದ್ಯ, 36 ಗೆಲುವು) ಅವರನ್ನು ಹಿಂದಿಕ್ಕಿದ್ದಾರೆ.
ಇನ್ನು ಪಟ್ಟಿಯಲ್ಲಿ ಆಸ್ಟ್ರೇಲಿಯಾ ಮಾಜಿ ನಾಯಕ ರಿಕ್ಕಿ ಪಾಂಟಿಂಗ್ ಅಗ್ರ ಸ್ಥಾನದಲ್ಲಿದ್ದು, ಪಾಟಿಂಗ್ ಒಟ್ಟು 230 ಪಂದ್ಯಗಳಿಗೆ ತಂಡದ ನಾಯಕತ್ವ ವಹಿಸಿದ್ದು, ಈ ಪೈಕಿ 165 ಪಂದ್ಯಗಳಲ್ಲಿ ತಂಡ ಗೆಲುವು ಸಾಧಿಸಿದೆ. ಇನ್ನು ಭಾರತ ತಂಡದ ಮಾಜಿ ನಾಯಕ ಎಂಎಸ್ ಧೋನಿ ನೇತೃತ್ವದಲ್ಲಿ ತಂಡ 218 ಪಂದ್ಯಗಳನ್ನಾಡಿದ್ದು, ಈ ಪೈಕಿ 98 ಪಂದ್ಯಗಳಲ್ಲಿ ಜಯಗಳಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com