ಆಂಗ್ಲರ ವಿರುದ್ಧ ಸೋತರೂ ಸೆಮೀಸ್ ಗೆ ಕಿವೀಸ್.., 'ಮಹಾ ಅದ್ಭುತ' ನಡೆಯದ ಹೊರತು ಪಾಕ್ ಗಿಲ್ಲ ಅವಕಾಶ!

ಈ ಬಾರಿಯ ವಿಶ್ವಕಪ್ ಟೂರ್ನಿ ಪಾಕಿಸ್ತಾನ ತಂಡದ ಪಾಲಿಗೆ ಅಕ್ಷರಶಃ ದುಃಸ್ವಪ್ನವಾಗಿ ಮಾರ್ಪಟ್ಟಿದ್ದು, ಟೂರ್ನಿಯಲ್ಲಿ 'ಮಹಾ ಅದ್ಭುತ' ನಡೆಯದ ಹೊರತು ಪಾಕಿಸ್ತಾನ ಸೆಮಿ ಫೈನಲ್ ಪ್ರವೇಶಿಸುವ ಅವಕಾಶವೇ ಇಲ್ಲದಂತಾಗಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on: 
ಲಂಡನ್: ಈ ಬಾರಿಯ ವಿಶ್ವಕಪ್ ಟೂರ್ನಿ ಪಾಕಿಸ್ತಾನ ತಂಡದ ಪಾಲಿಗೆ ಅಕ್ಷರಶಃ ದುಃಸ್ವಪ್ನವಾಗಿ ಮಾರ್ಪಟ್ಟಿದ್ದು, ಟೂರ್ನಿಯಲ್ಲಿ 'ಮಹಾ ಅದ್ಭುತ' ನಡೆಯದ ಹೊರತು ಪಾಕಿಸ್ತಾನ ಸೆಮಿ ಫೈನಲ್ ಪ್ರವೇಶಿಸುವ ಅವಕಾಶವೇ ಇಲ್ಲದಂತಾಗಿದೆ.
ಹೌದು.. ಐಸಿಸಿ ವಿಶ್ವಕಪ್ ಟೂರ್ನಿಯ ಲೀಗ್ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡವನ್ನು ಮಣಿಸಿದ ಇಂಗ್ಲೆಂಡ್ ತಂಡ ಸೆಮಿಫೈನಲ್ ಪ್ರವೇಶಿಸಿದ್ದು, ಇತ್ತ ಆಂಗ್ಲರ ವಿರುದ್ಧ ಹೀನಾಯವಾಗಿ ಸೋತರೂ ನ್ಯೂಜಿಲೆಂಡ್ ತಂಡ ಅನಾಯಾಸವಾಗಿ ಸೆಮಿಫೈನಲ್ ಪ್ರವೇಶಿಸುವ ಕನಸು ಕಾಣುತ್ತಿದೆ. ಟೂರ್ನಿಯಲ್ಲಿ ಪಾಕಿಸ್ತಾನ ತನ್ನ ಮುಂದಿನ ಅಂತಿಮ ಪಂದ್ಯದಲ್ಲಿ ಬಾಂಗ್ಲಾದೇಶವನ್ನು ಎದುರಿಸಲಿದ್ದು, ಈ ಪಂದ್ಯದಲ್ಲಿ ಕ್ರಿಕೆಟ್ ಇತಿಹಾಸದಲ್ಲೇ ಎಂದೂ ಕಂಡು ಕೇಳರಿಯದ ರೀತಿಯಲ್ಲಿ ಗೆದ್ದರೆ ಮಾತ್ರ ಪಾಕಿಸ್ತಾನಕ್ಕೆ ಸೆಮೀಸ್ ಅವಕಾಶದ ಬಾಗಿಲು ತೆರೆಯುತ್ತದೆ. 
ಪಾಕಿಸ್ತಾನ ತಂಡ ಸದ್ಯ 8 ಪಂದ್ಯ ಆಡಿ 9 ಅಂಕಗಳೊಂದಿಗೆ 5ನೇ ಸ್ಥಾನದಲ್ಲಿದ್ದು,  ಪಾಕಿಸ್ತಾನ ಅಂತಿಮ ಲೀಗ್ ಪಂದ್ಯದಲ್ಲಿ ಬಾಂಗ್ಲಾದೇಶ ತಂಡವನ್ನು ಎದುರಿಸಲಿದೆ. ಜುಲೈ 5 ರಂದು ಲಾರ್ಡ್ಸ್ ಮೈದಾನದಲ್ಲಿ ಪಾಕಿಸ್ತಾನ ಹಾಗೂ ಬಾಂಗ್ಲಾದೇಶ ಮುಖಾಮುಖಿಯಾಗಲಿದೆ.  ಇನ್ನು ಇಂದಿನ ಸೋಲಿನೊಂದಿಗೆ ಲೀಗ್ ಹಂತದ ಪೂರ್ಣಗೊಳಿಸಿರುವ ನ್ಯೂಜಿಲೆಂಡ್ ತಂಡ ಐದು ಗೆಲುವು ಮೂರು ಸೋಲಿನೊಂದಿಗೆ ಒಟ್ಟು 11 ಅಂಕಗಳಿಸಿದೆ. ಪಾಕಿಸ್ತಾನ ಬಾಂಗ್ಲಾದೇಶದ ವಿರುದ್ಧದ ಪಂದ್ಯ ಗೆದ್ದರೆ ಆಗ ಆ ತಂಡದ ಅಂಕ ಕೂಡ 11ಕ್ಕೆ ಏರಿಕೆಯಾಗಲಿದೆಯಾದರೂ, ರನ್ ರೇನ್ ಲೆಕ್ಕಾಚಾರದಲ್ಲಿ ನ್ಯೂಜಿಲೆಂಡ್ ತಂಡ ಸೆಮಿಫೈನಲ್ ಗೆ ಅವಕಾಶ ಪಡೆಯಲಿದೆ.
ಹಾಗಾದರೆ ಟೂರ್ನಿಯಿಂದ ನ್ಯೂಜಿಲೆಂಡ್ ತಂಡವನ್ನು ಹೊರದಬ್ಬಿ ಪಾಕಿಸ್ತಾನ ಸೆಮೀಸ್ ಪ್ರವೇಶಿಸಲು ಆ ತಂಡ ಏನು ಮಾಡಬೇಕು.. ಇಲ್ಲಿದೆ ನೋಡಿ ಕ್ರಿಕೆಟ್ ಪಂಡಿತರ ಸೆಮೀಸ್ ಲೆಕ್ಕಾಚಾರ..
ನಾಳೆ ಲಾರ್ಡ್ಸ್ ನಲ್ಲಿ ನಡೆಯಲಿರುವ ಪಂದ್ಯದಲ್ಲಿ ಬಾಂಗ್ಲಾದೇಶದ ವಿರುದ್ಧ ಕನಿಷ್ಠ 311 ರನ್‌ ಗಳ ಅಂತರದಲ್ಲಿ ಪಾಕಿಸ್ತಾನ ಗೆಲುವು ಸಾಧಿಸಬೇಕು.
ಬಾಂಗ್ಲಾ ವಿರುದ್ಧ ಪಾಕಿಸ್ತಾನ 350 ರನ್ ಸಿಡಿಸಿದರೆ, 311 ರನ್‌ ಗಳಿಂದ ಬಾಂಗ್ಲಾ ವಿರುದ್ಧ ಗೆಲುವು ಸಾಧಿಸಬೇಕು
ಬಾಂಗ್ಲಾ ವಿರುದ್ಧ ಪಾಕಿಸ್ತಾನ  400 ರನ್ ಸಿಡಿಸಿದರೆ,  316 ರನ್‌ಗಳಿಂದ ಗೆಲುವು ಸಾಧಿಸಬೇಕು
ಬಾಂಗ್ಲಾ ವಿರುದ್ಧ ಪಾಕಿಸ್ತಾನ  321 ರನ್ ಸಿಡಿಸಿದರೆ, 321 ರನ್‌ಗಳಿಂದ ಗೆಲ್ಲಬೇಕು
ಅದೇ ಒಂದು ವೇಳೆ ಬಾಂಗ್ಲಾದೇಶ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರೆ, ಒಂದು ಎಸೆತ ಎಸೆಯುವ ಮುನ್ನವೇ ಪಾಕಿಸ್ತಾನ ಟೂರ್ನಿಯಿಂದ ಹೊರಬೀಳಲಿದೆ. ಹೀಗಾಗಿ ಪಾಕಿಸ್ತಾನದ ಸೆಮಿಫೈನಲ್ ಕನಸು ನುಚ್ಚುನೂರಾಗಿದೆ.
ಇಂಗ್ಲೆಂಡ್ ವಿರುದ್ಧದ ಭಾರತದ ಸೋಲು ಪಾಕಿಸ್ತಾನ ತಂಡವನ್ನು ಇಡೀ ಟೂರ್ನಿಯಿಂದಲೇ ಹೊರ ಬೀಳುವಂತೆ ಮಾಡಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com