'ಇಂದು ತಂಡ ಭರ್ಜರಿ ಪ್ರದರ್ಶನ ನೀಡಿದೆ. ಜೇಸನ್ ರಾಯ್ ಹಾಗೂ ಬೇರ್ ಸ್ಟೋ ತಂಡಕ್ಕೆ ಉತ್ತಮ ಆರಂಭ ನೀಡಿದರು. 25 ಓವರ್ ನ ಬಳಿಕ ಪಿಚ್ ವರ್ತನೆ ಬದಲಾಯಿತು. ಬ್ಯಾಟ್ಸ್ ಮನ್ ಗಳು ರನ್ ಬಾರಿಸಲು ಶ್ರಮಿಸಿದರು. ಆದರೂ, ಇಂಗ್ಲೆಂಡ್ ಸವಾಲಿನ ಮೊತ್ತ ಕಲೆ ಹಾಕುವಲ್ಲಿ ಸಫಲವಾಯಿತು. ನಾವು ಮೊದಲು ಬ್ಯಾಟಿಂಗ್ ಮಾಡುವ ನಿರ್ಣಯ ಉತ್ತಮವಾಗಿ ಇತ್ತು. ಎರಡನೇ ಇನ್ನಿಂಗ್ಸ್ ಬ್ಯಾಟ್ ಮಾಡುವಾಗ ಪಿಚ್ ಕೊಂಚ ಬೌಲರ್ ಗಳಿಗೆ ನೆರವು ನೀಡುವುದನ್ನು ಮನಗೊಂಡು ಈ ತೀರ್ಮಾನ ಕೈಗೊಳ್ಳಲಾಯಿತು ಎಂದು ಮಾರ್ಗನ್ ಹೇಳಿದ್ದಾರೆ.