ಐಸಿಸಿ ವಿಶ್ವಕಪ್ 2019: ಪದೇ ಪದೇ ಧೋನಿ ಬ್ಯಾಟ್ ಬ್ರಾಂಡ್ ಬದಲಾವಣೆ, ನಿವೃತ್ತಿಯ ಮುನ್ಸೂಚನೆ?

ಐಸಿಸಿ ವಿಶ್ವಕಪ್ ಮುಕ್ತಾಯದ ಬೆನ್ನಲ್ಲೇ ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್ ವಿದಾಯ ಘೋಷಣೆ ಮಾಡಲಿದ್ದಾರೆ ಎಂಬ ವಾದ ಬಲವಾಗಿ ಕೇಳಿಬರುತ್ತಿದೆ. ಇದಕ್ಕೆ ಇಂಬು ನೀಡುವಂತೆ ಧೋನಿ ಪದೇ ಪದೇ ತಮ್ಮ ಬ್ಯಾಟ್ ಬ್ರಾಂಡ್ ಗಳನ್ನು ಬದಲಾಯಿಸುತ್ತಿದ್ದಾರೆ.
Updated on: 
ಲಂಡನ್: ಹಾಲಿ ಐಸಿಸಿ ವಿಶ್ವಕಪ್ ಮುಕ್ತಾಯದ ಬೆನ್ನಲ್ಲೇ ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್ ವಿದಾಯ ಘೋಷಣೆ ಮಾಡಲಿದ್ದಾರೆ ಎಂಬ ವಾದ ಬಲವಾಗಿ ಕೇಳಿಬರುತ್ತಿದೆ. ಇದಕ್ಕೆ ಇಂಬು ನೀಡುವಂತೆ ಧೋನಿ ಪದೇ ಪದೇ ತಮ್ಮ ಬ್ಯಾಟ್ ಬ್ರಾಂಡ್ ಗಳನ್ನು ಬದಲಾಯಿಸುತ್ತಿದ್ದಾರೆ.
ಐಸಿಸಿ ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡದ ಜೈತ್ರ ಯಾತ್ರೆ ಮುಂದುವರೆದಿರುವಂತೆಯೇ ಧೋನಿ ನಿಧಾನಗತಿಯ ಬ್ಯಾಟಿಂಗ್ ಕೂಡ ವ್ಯಾಪಕ ಸುದ್ದಿಗೆ ಗ್ರಾಸವಾಗಿದೆ. ಇದೇ ವೇಳೆ ಧೋನಿ ನಿವೃತ್ತಿ ಕುರಿತು ವ್ಯಾಪಕ ಸುದ್ದಿಗಳು ಹರಿದಾಡುತ್ತಿವೆ. ಈ ಕುರಿತಂತೆ ಧೋನಿ ಅಭಿಮಾನಿಗಳು ಬೇಸರ ವ್ಯಕ್ತಪಡಿಸುತ್ತಿದ್ದು, ಧೋನಿ ಅವರ ಒಂದು ವಿಚಿತ್ರ ನಡೆ ಧೋನಿ ಅಭಿಮಾನಿಗಳ ಆತಂಕಕ್ಕೆ ಕಾರಣವಾಗಿದೆ.
ಹೌದು.. ವಿಶ್ವಕಪ್‌ ಟೂರ್ನಿಯ ಪಂದ್ಯಗಳಲ್ಲಿ ಮಹೇಂದ್ರ ಸಿಂಗ್ ಧೋನಿ ಪದೇ ಪದೇ ತಮ್ಮ ಬ್ಯಾಟ್ ಗಳ ಬ್ರಾಂಡ್ ಅನ್ನು ಬದಲಿಸುತ್ತಿದ್ದಾರೆ. ಧೋನಿ ಅವರ ಈ ಅಚ್ಚರಿ ನಡೆಯ ಹಿಂದೆ ಬಿಸಿನೆಸ್ ಕಾರಣವಿರಬಹುದು. ಅವರ ಬ್ಯಾಟ್ ಬ್ರಾಂಡ್ ಗಳಿಗೆ ಕೋಟಿ ಕೋಟಿ ಹಣ ಪಡೆಯುತ್ತಿದ್ದಾರೆ ಎಂದು ಎಲ್ಲರೂ ಭಾವಿಸಿದ್ದರು. ಆದರೆ ನಿಜಾಂಶ ಬೇರೆಯೇ ಇದ್ದು, ಧೋನಿ ತಾವು ಬಳಸುತ್ತಿರುವ ಬ್ಯಾಟ್ ಬ್ರ್ಯಾಂಡ್ ಗಳಿಗೆ ಯಾವುದೇ ರೀತಿಯ ಹಣ ಪಡೆಯುತ್ತಿಲ್ಲ. ಧೋನಿ ನಡೆಯ ಹಿಂದೆ ಮಹತ್ವದ ಕಾರಣವಿದ್ದು,  ಕ್ರಿಕೆಟ್‌ ಜೀವನದ ಆರಂಭದ ಹಂತದಿಂದಲೂ ಅವರಿಗೆ ನೆರವಾದ ಬ್ಯಾಟ್‌ ಮೇಕರ್ ಗಳಿಗೆ ಧನ್ಯವಾದ ಅರ್ಪಿಸುವ ನಿಟ್ಟಿನಲ್ಲೇ ಧೋನಿ ಪ್ರತೀ ಪಂದ್ಯದಲ್ಲೂ ಪದೇ ಪದೇ ಬ್ಯಾಟ್ ಗಳನ್ನು ಬದಲಿಸುತ್ತಿದ್ದಾರೆ ಎನ್ನಲಾಗಿದೆ.
ಕ್ರಿಕೆಟ್ ವೃತ್ತಿಜೀವನದ ಅಂತಿಮ ಹಂತದಲ್ಲಿ ತಮ್ಮ ಬೆಳವಣಿಗೆಗೆ ಕಾರಣರಾದವರಿಗೆ ಧೋನಿ ಈ ಮೂಲಕ ಕೃತಜ್ಞತೆ ಸಲ್ಲಿಸುತ್ತಿದ್ದಾರೆ ಎನ್ನಲಾಗಿದೆ. ಇದೇ ಕಾರಣಕ್ಕೆ ಧೋನಿ ಅಭಿಮಾನಿಗಳು ಅವರ ನಿವೃತ್ತಿ ಕುರಿತಂತೆ ಬೇಸರ ವ್ಯಕ್ತಪಡಿಸುತ್ತಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com