ಐಸಿಸಿ ವಿಶ್ವಕಪ್ 2019, ಮೊದಲ ಸೆಮಿ ಫೈನಲ್: ಇಂಡೋ-ಕಿವೀಸ್ ಕಾದಾಟಕ್ಕೆ ಮಳೆ ಅಡ್ಡಿ

ಮೊದಲ ಸೆಮಿಫೈನಲ್ ಪಂದ್ಯಕ್ಕೆ ಮಳೆರಾಯ ಅಡಿಯಾಗಿದ್ದು, ನ್ಯೂಜಿಲೆಂಡ್ ಇನ್ನಿಂಗ್ಸ್ ಅಂತ್ಯಕ್ಕೆ ಇನ್ನು ಕೇವಲ 23 ಎಸೆತಗಳು ಬಾಕಿ ಇರುವಂತೆ ಭಾರಿ ಮಳೆ ಸುರಿದ ಪರಿಣಾಮ ಭಾರತ ಮತ್ತು ನ್ಯೂಜಿಲೆಂಡ್ ಆಟಗಾರರು ಪೆವಿಲಿಯನ್ ನತ್ತ ಹೆಜ್ಜೆ ಹಾಕಿದ್ದಾರೆ.
ಮೊದಲ ಸೆಮಿ ಫೈನಲ್ ಗೆ ಮಳೆ ಅಡ್ಡಿ
ಮೊದಲ ಸೆಮಿ ಫೈನಲ್ ಗೆ ಮಳೆ ಅಡ್ಡಿ
Updated on: 
ಲಂಡನ್: ಹಾಲಿ ಐಸಿಸಿ ವಿಶ್ವಕಪ್ ಟೂರ್ನಿಯ ಮೊದಲ ಸೆಮಿಫೈನಲ್ ಪಂದ್ಯಕ್ಕೆ ಮಳೆರಾಯ ಅಡಿಯಾಗಿದ್ದು, ನ್ಯೂಜಿಲೆಂಡ್ ಇನ್ನಿಂಗ್ಸ್ ಅಂತ್ಯಕ್ಕೆ ಇನ್ನು ಕೇವಲ 23 ಎಸೆತಗಳು ಬಾಕಿ ಇರುವಂತೆ ಭಾರಿ ಮಳೆ ಸುರಿದ ಪರಿಣಾಮ ಭಾರತ ಮತ್ತು ನ್ಯೂಜಿಲೆಂಡ್ ಆಟಗಾರರು ಪೆವಿಲಿಯನ್ ನತ್ತ ಹೆಜ್ಜೆ ಹಾಕಿದ್ದಾರೆ.
ಮಳೆ ಬಂದು ಆಟ ನಿಂತಾಗ ನ್ಯೂಜಿಲೆಂಡ್ ತಂಡ 46.1 ಓವರ್ ನಲ್ಲಿ ಐದು ವಿಕೆಟ್ ನಷ್ಟಕ್ಕೆ 211 ರನ್ ಗಳಿಸಿದೆ. ನ್ಯೂಜಿಲೆಂಡ್ ಪರ 67 ರನ್ ಗಳಿಸಿರುವ ರಾಸ್ ಟೇಲರ್ ಮತ್ತು 3 ರನ್ ಗಳಿಸಿರುವ ಟಾಮ್ ಲಾಥಮ್ ಕ್ರೀಸ್ ಕಾಯ್ದುಕೊಂಡಿದ್ದಾರೆ. ಇನ್ನು ಭಾರತದ ಪರ ಜಸ್ ಪ್ರೀತ್ ಬುಮ್ರಾ. ಯಜುವೇಂದ್ರ ಚಹಲ್, ಹಾರ್ದಿಕ್ ಪಾಂಡ್ಯ, ಭುವನೇಶ್ವರ್ ಕುಮಾರ್ ಹಾಗೂ ರವೀಂದ್ರ ಜಡೇಜಾ ತಲಾ 1 ವಿಕೆಟ್ ಪಡೆದಿದ್ದಾರೆ.
ಟಾಸ್ ಗೆದ್ದ ನ್ಯೂಜಿಲೆಂಡ್ ತಂಡ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com