ಆದರೆ ಆ ಬಳಿಕ ಕ್ರೀಸ್ ಗೆ ಬಂದ ನಾಯಕ ಕೇನ್ ವಿಲಿಯಮ್ಸನ್, ಹೆನ್ರಿ ನಿಕೋಲಸ್ ಜೊತೆಗೂಡಿ ತಂಡವನ್ನು ಆರಂಭಿಕ ಆಘಾತದಿಂದ ಮೇಲೆತ್ತುವ ಪ್ರಯತ್ನ ಮಾಡಿದರು. ಇಬ್ಬರೂ ಆಟಗಾರರು ರಕ್ಷಣಾತ್ಮಕ ಆಟದ ಮೊರೆ ಹೋಗಿ ನಿಧಾನಗತಿಯಲ್ಲೇ ರನ್ ಕದಿಯುತ್ತಾ 18.2 ಓವರ್ ನಲ್ಲಿ 69ರನ್ ಗಳಿಸಿದರು. ಈ ಹಂತದಲ್ಲಿ ಜಡೇಜಾ ಬೌಲಿಂಗ್ ನಲ್ಲಿ ಹೆನ್ರಿ ನಿಕೋಲಸ್ ಕ್ಲೀನ್ ಬೋಲ್ಡ್ ಆಗುವುದರೊಂದಿಗೆ ಕಿವೀಸ್ ಪಡೆಯ ಮತ್ತೊಂದು ವಿಕೆಟ್ ಪತನವಾಗಿದೆ.