ಐಸಿಸಿ ವಿಶ್ವಕಪ್ 2019: ವಾರ್ನರ್ ಶತಕ ಪಾಕಿಸ್ತಾನದ ವಿರುದ್ಧ ಆಸ್ಟ್ರೇಲಿಯಾಗೆ 41 ರನ್ ಗಳ ಜಯ

ಐಸಿಸಿ ವಿಶ್ವಕಪ್ 2019 ರ ಟೂರ್ನಿಯಲ್ಲಿ ಡೇವಿಡ್ ವಾರ್ನರ್ ಶತಕದ ಸಹಾಯದಿಂದ ಆಸ್ಟ್ರೇಲಿಯಾ ಪಾಕಿಸ್ತಾನದ ವಿರುದ್ಧ 41 ರನ್ ಗಳ ಭರ್ಜರಿ ಗೆಲುವು ದಾಖಲಿಸಿದೆ.
ಐಸಿಸಿ ವಿಶ್ವಕಪ್ 2019: ವಾರ್ನರ್ ಶತಕ ಪಾಕಿಸ್ತಾನದ ವಿರುದ್ಧ ಆಸ್ಟ್ರೇಲಿಯಾಗೆ 41 ರನ್ ಗಳ ಜಯದ ಪುಳಕ
ಐಸಿಸಿ ವಿಶ್ವಕಪ್ 2019: ವಾರ್ನರ್ ಶತಕ ಪಾಕಿಸ್ತಾನದ ವಿರುದ್ಧ ಆಸ್ಟ್ರೇಲಿಯಾಗೆ 41 ರನ್ ಗಳ ಜಯದ ಪುಳಕ
Updated on
ಐಸಿಸಿ ವಿಶ್ವಕಪ್ 2019 ರ ಟೂರ್ನಿಯಲ್ಲಿ ಡೇವಿಡ್ ವಾರ್ನರ್ ಶತಕದ ಸಹಾಯದಿಂದ ಆಸ್ಟ್ರೇಲಿಯಾ ಪಾಕಿಸ್ತಾನದ ವಿರುದ್ಧ 41 ರನ್ ಗಳ ಭರ್ಜರಿ ಗೆಲುವು ದಾಖಲಿಸಿದೆ. 
ಚೆಂಡು ವಿರೂಪದ ಪ್ರಕರಣವಾದ ನಂತರ ಮೊದಲ ಬಾರಿಗೆ ವಾರ್ನರ್ ಶತಕ ದಾಖಲಿಸಿದ್ದು ತಂಡದ ಗೆಲುವಿಗೆ ನೆರವಾಗಿದ್ದಾರೆ. 
ಮೊದಲು ಬ್ಯಾಟಿಂಗ್ ಆಯ್ದುಕೊಂಡ ಆಸ್ಟ್ರೇಲಿಯಾ ತಂಡ 48.06 ಓವರ್ ಗಳಲ್ಲಿ 10 ವಿಕೆಟ್ ಕಳೆದುಕೊಂಡು 307 ರನ್ ಗಳಿಸಿ ಪಾಕ್ ಗೆ ಸಾಧಾರಣ ಮೊತ್ತದ ಗುರಿಯನ್ನು ನೀಡಿತ್ತು.  
ಆಸ್ಟ್ರೇಲಿಯಾ ನೀಡಿದ್ದ ಸಾಧಾರಣ ಮೊತ್ತವನ್ನು ತಲುಪುವುದಕ್ಕೂ ಹೆಣಗಿದ ಪಾಕಿಸ್ತಾನ ಬ್ಯಾಟ್ಸ್ ಮನ್ ಗಳು ಪೆವಿಲಿಯನ್ ಪರೇಡ್ ನಡೆಸಿದರು, ಇಮಾಮ್-ಉಲ್-ಹಕ್ 53 ರನ್ ಗಳಿಸಿದ್ದನ್ನು ಹೊರತುಪಡಿಸಿದರೆ ಬೇರಾವ ಬ್ಯಾಟ್ಸ್ ಮನ್ ಗಳೂ 50 ರನ್ ಗಳ ಗಡಿಯನ್ನೂ ದಾಟಲು ಸಾಧ್ಯವಾಗದೇ ಪಾಕ್ ತಂಡ 266 ರನ್ ಗಳಿಸಿ ಇನ್ನು 4.2 ಓವರ್ ಗಳಿರುವಂತೆಯೇ ತನ್ನೆಲ್ಲಾ ವಿಕೆಟ್ ಗಳನ್ನು ಕಳೆದುಕೊಂಡು ಆಸ್ಟ್ರೇಲಿಯಾ ಎದುರು ಸೋಲೊಪ್ಪಿಕೊಂಡಿತು. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

X
Kannada Prabha
www.kannadaprabha.com