ವಾಘಾ ಗಡಿಯಲ್ಲಿ ತೋರಿಸಿದ್ದ ಕಿಚ್ಚು, ಮೈದಾನದಲ್ಲಿ ಠುಸ್ ಆಯ್ತಾ? ಪಾಕ್ ಕ್ರಿಕೆಟಿಗರಿಗೆ ಅಖ್ತರ್ ಚಾಟಿ!
ವಾಘಾ ಗಡಿಯಲ್ಲಿ ಭಾರತೀಯ ಯೋಧರ ವಿರುದ್ಧ ತೋರಿಸಿದ್ದ ಕಿಚ್ಚು ಮೈದಾನದಲ್ಲಿ ಟೀಂ ಇಂಡಿಯಾ ಆಟಗಾರರನ್ನು ಕಂಡ ಕ್ಷಣ ಠುಸ್ ಆಯ್ತಾ ಎಂದು ಪಾಕ್ ಬೌಲರ್ ಹಸನ್ ಅಲಿಗೆ ಪಾಕ್ ಮಾಜಿ...

Published On :
ಇಸ್ಲಾಮಾಬಾದ್: ವಾಘಾ ಗಡಿಯಲ್ಲಿ ಭಾರತೀಯ ಯೋಧರ ವಿರುದ್ಧ ತೋರಿಸಿದ್ದ ಕಿಚ್ಚು ಮೈದಾನದಲ್ಲಿ ಟೀಂ ಇಂಡಿಯಾ ಆಟಗಾರರನ್ನು ಕಂಡ ಕ್ಷಣ ಠುಸ್ ಆಯ್ತಾ ಎಂದು ಪಾಕ್ ಬೌಲರ್ ಹಸನ್ ಅಲಿಗೆ ಪಾಕ್ ಮಾಜಿ ಕ್ರಿಕೆಟಿಗ ಶೋಯಬ್ ಅಖ್ತರ್ ಕಿಚಾಯಿಸಿದ್ದಾರೆ.
ವಿಶ್ವಕಪ್ ಟೂರ್ನಿಯಲ್ಲಿ ಟೀಂ ಇಂಡಿಯಾ ವಿರುದ್ಧ ಪಾಕಿಸ್ತಾನ ಸೋಲಿಗೆ ಪಾಕ್ ಅಭಿಮಾನಿಗಳು ತೀವ್ರ ಆಕ್ರೋಶ ಹೊರಹಾಕಿದ್ದರು. ಇದರ ಜೊತೆಗೆ ಮಾಜಿ ಕ್ರಿಕೆಟಿಗರು ಸಹ ತಮ್ಮ ಅಸಹನೆಯನ್ನು ಹೊರಹಾಕಿದ್ದಾರೆ.
ವಾಘಾ ಗಡಿಯಲ್ಲಿ ಕಳೆದ ವರ್ಷ ಭಾರತ-ಪಾಕಿಸ್ತಾನ ಸೈನಿಕರ ಪರಸ್ಪರ ಧ್ವಜ ಗೌರವ ಸಲ್ಲಿಸುವ ವೇಳೆ ಪಾಕ್ ಸೈನಿಕರ ಮಧ್ಯೆ ಹೋಗಿ ಭಾರತೀಯ ಯೋಧರನ್ನು ಕಿಚಾಯಿಸುವಂತೆ ವರ್ತಿಸಿ, ತೊಡೆ ತಟ್ಟಿದ್ದರು.
ಉಭಯ ದೇಶಗಳ ಸೌಹಾರ್ದ ಕಾರ್ಯಕ್ರಮದಲ್ಲಿ ಹಸನ್ ಅಲಿ ತೋರಿದ ವರ್ತನೆಗೆ ವಿರೋಧ ವ್ಯಕ್ತವಾಗಿತ್ತು. ಟ್ವೀಟರ್ ನಲ್ಲಿ ವೈರಲ್ ಆಗಿದ್ದ ವಿಡಿಯೋಗೆ ಸಾಕಷ್ಟು ಟೀಕೆಗಳು ವ್ಯಕ್ತವಾಗಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
ಟೀಂ ಇಂಡಿಯಾTeam Indiaವಾಘಾ ಗಡಿWagah borderShoaib Akhtarಶೋಯಬ್ ಅಖ್ತರ್Cricket Offbeatಕ್ರಿಕೆಟ್ ಸ್ವಾರಸ್ಯPakistan teamಪಾಕಿಸ್ತಾನ ತಂಡHasan Aliಹಸನ್ ಅಲಿ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


