ಚೇತರಿಸಿಕೊಳ್ಳದ ಶಿಖರ್ ಧವನ್ ವಿಶ್ವಕಪ್‌ನಿಂದಲೇ ಸಂಪೂರ್ಣ ಹೊರಕ್ಕೆ!

ಟೀಂ ಇಂಡಿಯಾದ ಸ್ಫೋಟಕ ಬ್ಯಾಟ್ಸ್ ಮನ್ ಶಿಖರ್ ಧವನ್ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದ ವೇಳೆ ಗಾಯಗೊಂಡಿದ್ದು ಅವರು ಚೇತರಿಸಿಕೊಳ್ಳದ ಕಾರಣ ಇದೀಗ ವಿಶ್ವಕಪ್ ಟೂರ್ನಿಯಿಂದಲೇ ಹೊರ ಬಿದ್ದಿದ್ದಾರೆ.
ಶಿಖರ್ ಧವನ್
ಶಿಖರ್ ಧವನ್
Updated on: 
ನವದೆಹಲಿ: ಟೀಂ ಇಂಡಿಯಾದ ಸ್ಫೋಟಕ ಬ್ಯಾಟ್ಸ್ ಮನ್ ಶಿಖರ್ ಧವನ್ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದ ವೇಳೆ ಗಾಯಗೊಂಡಿದ್ದು ಅವರು ಚೇತರಿಸಿಕೊಳ್ಳದ ಕಾರಣ ಇದೀಗ ವಿಶ್ವಕಪ್ ಟೂರ್ನಿಯಿಂದಲೇ ಹೊರ ಬಿದ್ದಿದ್ದಾರೆ.
ಆಸ್ಟ್ರೇಲಿಯಾ ವಿರುದ್ಧದ ಪಂದ್ಯದ ವೇಳೆ ಶಿಖರ್ ಧವನ್ ಅವರ ಹೆಬ್ಬೆರಳಿಗೆ ಗಾಯವಾಗಿತ್ತು. ಆದರೆ ಅವರನ್ನು ಸ್ವದೇಶಕ್ಕೆ ಕಳಿಸದೇ ಲಂಡನ್ ನಲ್ಲೇ ಉಳಿಸಿಕೊಂಡು ಬಿಸಿಸಿಐ ವೈದ್ಯಕೀಯ ತಂಡವು ಒಂದು ವಾರದ ನಿಗಾ ವಹಿಸಲು ನಿರ್ಧರಿಸಿತ್ತು.
ಆದರೆ ಶಿಖರ್ ಧವನ್ ಗುಣಮುಖರಾಗಲು ಕನಿಷ್ಠ ಇನ್ನು ಮೂರು ವಾರ ಬೇಕಿದೆ ಎಂಬ ವರದಿಗಳು ಬಂದಿದ್ದವು. ಸದ್ಯ ನಿಗದಿತ ಅವಧಿಯೊಳಗೆ ಧವನ್ ಚೇತರಿಕೆ ಅಸಾಧ್ಯ ಎಂಬುದು ಕಂಡು ಬಂದ ಹಿನ್ನಲೆಯಲ್ಲಿ ವಿಶ್ವಕಪ್ ತಂಡದಿಂದ ನಿರ್ಗಮಿಸಬೇಕಾಗಿದೆ. 
ಶಿಖರ್ ಧವನ್ ಬದಲಿಗೆ ರಿಷಬ್ ಪಂತ್ ಗೆ ತಂಡದಲ್ಲಿ ಸ್ಥಾನ ನೀಡಲಾಗಿದೆ. ಆರಂಭಿಕರಾಗಿ ಕಣಕ್ಕಿಳಿಯುತ್ತಿದ್ದ ಧವನ್ ಬದಲಿಗೆ ಕೆಎಲ್ ರಾಹುಲ್ ಆರಂಭಿಕರಾಗಿ ಕಣಕ್ಕಿಳಿಯುತ್ತಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com