ಎರಡು ಅತ್ಯುತ್ತಮ ಡೈವ್ ಕ್ಯಾಚ್‌ಗಳೇ; ಈ ವಿಡಿಯೋ ನೋಡಿ ನಿರ್ಧರಿಸಿ ಯಾವುದು ಸರ್ವಶ್ರೇಷ್ಠ ಕ್ಯಾಚ್!

ವಿಶ್ವಕಪ್ ಟೂರ್ನಿಯಲ್ಲಿ ಅದ್ಭುತ ಕ್ಯಾಚ್‌ಗಳು ದಾಖಲಾಗಿವೆ. ಆದರೆ ಒಂದೇ ಪಂದ್ಯದಲ್ಲಿ ಎರಡು ಅತ್ಯುತ್ತಮ ಡೈವ್ ಕ್ಯಾಚ್‌ಗಳು ಅಭಿಮಾನಿಗಳನ್ನು ರಂಜಿಸಿವೆ.
ಮಾರ್ಟಿನ್ ಗುಪ್ಟಿಲ್-ಸ್ಟೀವ್ ಸ್ಮಿತ್
ಮಾರ್ಟಿನ್ ಗುಪ್ಟಿಲ್-ಸ್ಟೀವ್ ಸ್ಮಿತ್
ಲಂಡನ್: ವಿಶ್ವಕಪ್ ಟೂರ್ನಿಯಲ್ಲಿ ಅದ್ಭುತ ಕ್ಯಾಚ್‌ಗಳು ದಾಖಲಾಗಿವೆ. ಆದರೆ ಒಂದೇ ಪಂದ್ಯದಲ್ಲಿ ಎರಡು ಅತ್ಯುತ್ತಮ ಡೈವ್ ಕ್ಯಾಚ್‌ಗಳು ಅಭಿಮಾನಿಗಳನ್ನು ರಂಜಿಸಿವೆ.
ಆಸ್ಟ್ರೇಲಿಯಾ ಮತ್ತು ನ್ಯೂಜಿಲ್ಯಾಂಡ್ ನಡುವಿನ ಪಂದ್ಯದಲ್ಲಿ ಆಸೀಸ್ 86 ರನ್ ಗಳಿಂದ ಗೆಲುವು ಸಾಧಿಸಿದೆ. ಈ ಪಂದ್ಯದಲ್ಲಿ ಸ್ಟೀವ್ ಸ್ಮಿತ್ ಮತ್ತು ಮಾರ್ಟಿನ್ ಗುಪ್ಟಿಲ್ ರನ್ನು ಅದ್ಭುತ ಕ್ಯಾಚ್ ಗಳ ಔಟ್ ಮಾಡಲಾಗಿತ್ತು. 
ಮೊದಲು ಬ್ಯಾಟಿಂಗ್ ಮಾಡಿದ್ದ ಆಸ್ಟ್ರೇಲಿಯಾ ಪರ ಬ್ಯಾಟ್ ಬೀಸಿದ್ದ ಸ್ಟೀವ್ ಸ್ಮಿತ್ 5 ರನ್ ಗಳಿಸಿದ್ದಾಗ ಲೆಗ್ ಸೈಡ್ ನಲ್ಲಿ ಸ್ವೀಪ್ ಮಾಡಿದ್ದರು. ಈ ವೇಳೆ ಅಲ್ಲಿ ಫೀಲ್ಡ್ ಮಾಡುತ್ತಿದ್ದ ಮಾರ್ಟಿನ್ ಗುಪ್ಟಿಲ್ ಡೈವ್ ಮಾಡಿ ಅದ್ಭುತ ಕ್ಯಾಚ್ ಹಿಡಿದಿದ್ದರು. 
ನಂತರ ಬ್ಯಾಟಿಂಗ್ ಮಾಡಿದ್ದ ನ್ಯೂಜಿಲ್ಯಾಂಡ್ ತಂಡದ ಪರ ಬ್ಯಾಟ್ ಬೀಸಿದ್ದ ಲ್ಯಾಥಮ್ ಬೌಲ್ಟ್ ಎಸೆತವನ್ನು ಆಫ್ ಸೈಡ್ ನಲ್ಲಿ ಬಾರಿಸಿದರು. ಈ ವೇಳೆ ಸ್ಟೀವ್ ಸ್ಮಿತ್ ಡೈವ್ ಮಾಡಿ ಒಂದೇ ಕೈನಲ್ಲಿ ಚೆಂಡನ್ನು ಹಿಡಿದರು. ಈ ಇಬ್ಬರು ಹಿಡಿದಿರುವ ವಿಡಿಯೋವನ್ನು ಐಸಿಸಿ ಕ್ಲಬ್ ಮಾಡಿ ಟ್ವೀಟ್ ಮಾಡಿದ್ದು ಯಾವುದೇ ಅದ್ಭುತ ಕ್ಯಾಚ್ ಎಂದು ಪ್ರಶ್ನಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com