ಕ್ರಿಕೆಟ್ ನ ಹಿತದೃಷ್ಟಿಯಿಂದ ಇಂತಹ ಪ್ರಮಾದಗಳು ಒಳ್ಳೆಯದಲ್ಲ: ರೋಹಿತ್ ಶರ್ಮಾ

ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಆರ್ ಸಿಬಿ ವಿರುದ್ಧದ ಪಂದ್ಯದಲ್ಲಿ ಲಸಿತ್ ಮಲಿಂಗಾ ಎಸೆದ ಅಂತಿಮ ಎಸೆತ ನೋ ಬಾಲ್ ಆಗಿದ್ದು ಅದನ್ನು ಗುರುತಿಸದ ಅಂಪೈರ್ ಗಳ ಕಾರ್ಯ ಇದೀಗ ವ್ಯಾಪಕ ಟೀಕೆಗೆ ಕಾರಣವಾಗಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on: 
ಬೆಂಗಳೂರು: ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಆರ್ ಸಿಬಿ ವಿರುದ್ಧದ ಪಂದ್ಯದಲ್ಲಿ ಲಸಿತ್ ಮಲಿಂಗಾ ಎಸೆದ ಅಂತಿಮ ಎಸೆತ ನೋ ಬಾಲ್ ಆಗಿದ್ದು ಅದನ್ನು ಗುರುತಿಸದ ಅಂಪೈರ್ ಗಳ ಕಾರ್ಯ ಇದೀಗ ವ್ಯಾಪಕ ಟೀಕೆಗೆ ಕಾರಣವಾಗಿದೆ.
ಬೆಂಗಳೂರು ತಂಡದ ವಿರುದ್ಧದ ಪಂದ್ಯದಲ್ಲಿ ಮಾಲಿಂಗ ಎಸೆದ ಕೊನೇ ಎಸೆತದಲ್ಲಿ ಆರ್​ಸಿಬಿ ಜಯಕ್ಕೆ 7 ರನ್ ಅಗತ್ಯವಿತ್ತು. ಈ ವೇಳೆ ಶಿವಂ ದುಬೇ ಲಾಂಗ್​ಆನ್​ನತ್ತ ಚೆಂಡನ್ನು ಬಾರಿಸಿ 1 ರನ್ ಪೇರಿಸಿದ ಬೆನ್ನಲ್ಲಿಯೇ ಮುಂಬೈ ವಿಜಯೋತ್ಸವ ಆರಂಭಿಸಿತ್ತು. ಆದರೆ, ಮಾಲಿಂಗ ಎಸೆದ ಈ ಎಸೆತ ನೋಬಾಲ್ ಆಗಿದ್ದನ್ನು ಅಂಪೈರ್ ಎಸ್.ರವಿ ಗಮನಿಸಲಿಲ್ಲ. ಪಂದ್ಯ ಮುಗಿದ ಬೆನ್ನಲ್ಲಿಯೇ ಸಿಟ್ಟಿನಿಂದ ಕುದಿಯುತ್ತಿದ್ದ ಕೊಹ್ಲಿ, ಅಂಪೈರ್​ಗಳ ವಿರುದ್ಧ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿಯೇ ಹರಿಹಾಯ್ದರು.
ಕೊಹ್ಲಿ ಬೆನ್ನಲ್ಲೇ ಮುಂಬೈ ತಂಡದ ನಾಯಕ ರೋಹಿತ್ ಶರ್ಮಾ ಕೂಡ ಅಂಪೈರ್ ಗಳ ಪ್ರಮಾದದ ವಿರುದ್ಧ ಕಿಡಿಕಾರಿದ್ದು, ಕ್ರಿಕೆಟ್ ನ ಹಿತದೃಷ್ಟಿಯಿಂದ ಇಂತಹ ಪ್ರಮಾದಗಳು ಒಳ್ಳೆಯದಲ್ಲ ಎಂದು ಹೇಳಿದ್ದಾರೆ. ಪ್ರಮಾಣಿಕವಾಗಿ ಹೇಳುತ್ತೇನೆ ನಾವು ವಿಜಯೋತ್ಸವ ಸಂಭ್ರಮದ ಬಳಿಕ ಕ್ರೀಡಾಂಗಣ ತೊರೆದ ಬಳಿಕವೇ ಅದು ನೋಬಾಲ್ ಎಂದು ತಿಳಿಯಿತು. ಕ್ರಿಕೆಟ್ ನಲ್ಲಿ ಇಂತಹ ಪ್ರಮಾದಗಳು ಆಟದ ಹಿತದೃಷ್ಟಿಯಿಂದ ಸರಿಯಲ್ಲ. ಮೈದಾನದಲ್ಲಿರುವ ಆಟಗಾರರಿಗೆ ಈ ಬಗ್ಗೆ ತಿಳಿಯುವುದಿಲ್ಲ. ಅಂಪೈರ್ ಗಳೇ ಈ ಬಗ್ಗೆ ಜಾಗರೂಕರಾಗಿರಬೇಕು. ಅಂತೆಯೇ ಬುಮ್ರಾ ಎಸೆದ ಉತ್ತಮ ಎಸೆತವನ್ನೂ ಅಂಪೈರ್ ಗಳು ವೈಡ್ ಎಂದು ಘೋಷಣೆ ಮಾಡಿದರು  ಎಂದು ಹೇಳಿದರು.
ಪಂದ್ಯದ ಕುರಿತು ಮಾತನಾಡಿದ 180ರನ್ ಗಳು ರಕ್ಷಣಾತ್ಮಕ ಮೊತ್ತವೇನಲ್ಲ. ಆದರೆ ಬೌಲರ್ ಗಳ ಮೇಲೆ ವಿಶ್ವಾಸವಿತ್ತು. ಅದನ್ನು ಅವರು ಉಳಿಸಿಕೊಂಡಿದ್ದಾರೆ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com