ಹೈದರಾಬಾದ್: ಡೇವಿಡ್ ವಾರ್ನರ್ ರಿಂದ ನನ್ನ ಶತಕದ ಆಟ ಕೂಡ ವ್ಯರ್ಥವಾಯಿತು ಎಂದು ರಾಜಸ್ತಾನ್ ರಾಯಲ್ಸ್ ತಂಡದ ಬ್ಯಾಟ್ಸಮನ್ ಸಂಜು ಸ್ಯಾಮ್ಸನ್ ಹೇಳಿದ್ದಾರೆ.
ನಿನ್ನೆ ಹೈದರಾಬಾದ್ ನಲ್ಲಿ ನಡೆದ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ತಂಡದ ವಿರುದ್ಧ ಸನ್ ರೈಸರ್ಸ್ ಹೈದರಾಬಾದ್ ತಂಡ 5 ವಿಕೆಟ್ ಗಳ ಅಂತರದ ಭರ್ಜರಿ ಜಯ ಸಾಧಿಸಿತು. ಇದಕ್ಕೂ ಮೊದಲು ಬ್ಯಾಟಿಂಗ್ ಮಾಡಿದ್ದ ರಾಜಸ್ತಾನ ತಂಡ ಸಂಜು ಸ್ಯಾಮ್ಸನ್ ಅವರ ಶತಕ ನೆರವಿನಿಂದ ನಿಗದಿತ 20 ಓವರ್ ಗಳಲ್ಲಿ 2 ವಿಕೆಟ್ ನಷ್ಟಕ್ಕೆ 198 ರನ್ ಗಳಿಸಿತು. ಅಂತೆಯೇ ಹೈದರಾಬಾದ್ ತಂಡಕ್ಕೆ 199 ರನ್ ಗಳ ಬೃಹತ್ ಗುರಿ ನೀಡಿತು. ಈ ಗುರಿಯನ್ನು ಬೆನ್ನು ಹತ್ತಿದ ಹೈದರಾಬಾದ್ ತಂಡ 19 ಓವರ್ ಗಳಲ್ಲಿಯೇ 5 ವಿಕೆಟ್ ನಷ್ಟಕ್ಕೆ 201 ರನ್ ಗಳಿಸಿ ವಿಕೆಟ್ ಗಳ ಭರ್ಜರಿ ಜಯ ಸಾಧಿಸಿತು.
ಈ ಪಂದ್ಯದಲ್ಲಿ ವಾರ್ನರ್ 69 ರನ್ ಗಳಿಸಿ ತಂಡದ ಗೆಲುವಿನ ಮಹತ್ವದ ಪಾತ್ರವಹಿಸಿದರು.
ಇನ್ನು ಪಂದ್ಯದ ಬಳಿಕ ವಾರ್ನರ್ ಜೊತೆ ವಿಶೇಷ ಸಂದರ್ಶನದಲ್ಲಿ ಮಾತನಾಡಿದ ಸಂಜು ಸ್ಯಾಮ್ಸನ್, ನಿಮ್ಮ ಬ್ಯಾಟಿಂಗ್ ನಿಂದ ನನ್ನ ಶತಕದ ಆಟ ಕೂಡ ವ್ಯರ್ಥವಾಯಿತು. ನಿಮ್ಮ ಉತ್ತಮ ಬ್ಯಾಟಿಂಗ್ ನಿಂದಾಗಿ ನಾವು ಪಂದ್ಯ ಕಳೆದುಕೊಳ್ಳುವಂತಾಯಿತು. 200 ರನ್ ಸಾಲುವುದಿಲ್ಲ. ನೀವಿರುವಾಗ 250 ರನ್ ಗಳಿಸಬೇಕಿತ್ತು ಎಂದು ಹೇಳಿದ್ದಾರೆ. ಅಂತೆಯೇ ಡೇವಿಜ್ ವಾರ್ನರ್ ರಿಂದ ಕೆಲ ಬ್ಯಾಟಿಂಗ್ ಟಿಪ್ಸ್ ಕೂಡ ಪಡೆದರು. ಈ ವೇಳೆ ಮಾತನಾಡಿದ ವಾರ್ನರ್ ಟಿ20ಯಲ್ಲಿ ಮೊದಲ ಆರು ಓವರ್ ಗಳು ನಿರ್ಣಾಯಕವಾಗಿರುತ್ತದೆ. ಈ ಓವರ್ ಗಳಲ್ಲಿಯೇ ನಾವು ಅತ್ಯಧಿಕ ರನ್ ಗಳಿಸಲು ಯತ್ನಿಸಬೇಕು ಎಂದು ಸಲಹೆ ನೀಡಿದರು.
.@davidwarner31: Fantastic innings mate! Well played! @IamSanjuSamson: David, you destroyed my day, my 100 was not enough!!