ಕ್ರೀಡಾಂಗಣದಲ್ಲಿ ಎಲ್ಲರ ಗಮನ ಸೆಳೆದ ಆರ್‌ಸಿಬಿ ಅಭಿಮಾನಿಯ ವಿಡಿಯೋ ವೈರಲ್, ಈಕೆ ಯಾರು ಗೊತ್ತ?

ಐಪಿಎಲ್ ಪಂದ್ಯಾವಳಿಯ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಕ್ರೀಡಾಂಗಣದಲ್ಲಿ ಆರ್‌ಸಿಬಿ ಅಭಿಮಾನಿಯೊಬ್ಬರು ಎಲ್ಲರ ಗಮನವನ್ನು ತನ್ನತ್ತ ಸೆಳೆದುಕೊಂಡಿದ್ದು...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on
ಬೆಂಗಳೂರು: ಐಪಿಎಲ್ ಪಂದ್ಯಾವಳಿಯ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಕ್ರೀಡಾಂಗಣದಲ್ಲಿ ಆರ್‌ಸಿಬಿ ಅಭಿಮಾನಿಯೊಬ್ಬರು ಎಲ್ಲರ ಗಮನವನ್ನು ತನ್ನತ್ತ ಸೆಳೆದುಕೊಂಡಿದ್ದು ಇದೀಗ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಈಕೆ ಯಾರೆಂದು ಸರ್ಚ್ ಮಾಡುತ್ತಿದ್ದಾರೆ.
ಪಂದ್ಯಾವಳಿಯ ನಡುವೆ ಕ್ಯಾಮೆರಾ ಕಣ್ಣುಗಳು ಆರ್‌ಸಿಬಿ ಅಭಿಮಾನಿಯೊಬ್ಬಾಕೆಯ ಮೇಲೆ ಕುಕ್ಕುತ್ತಿದ್ದವು. ಕೆಲವೇ ಕ್ಷಣದಲ್ಲಿ ಆಕೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದಾರೆ. ಅಷ್ಟಕ್ಕೂ ಈ ಚೆಲುವೆ ಯಾರೆಂಬುದನ್ನು ತಿಳಿಯುವ ಕುತೂಹಲವು ಹೆಚ್ಚಾಯಿತು.
ಕ್ರೀಡಾಂಗಣದಲ್ಲಿ ರೆಡ್ ಸ್ಕರ್ಟ್ ಧರಿಸಿ ಆರ್ಸಿಬಿ ಬಾವುಟ ಹಿಡಿದು ಚಿಯರ್ ಮಾಡುತ್ತಿದ್ದ ಈಕೆಯ ಹೆಸರು ದೀಪಿಕಾ ಘೋಸ್. ಅಲ್ಲದೆ ಅಪ್ಪಟ್ಟ ಆರ್‌ಸಿಬಿ ಅಭಿಮಾನಿಯಾಗಿದ್ದಾರೆ.
ಇನ್ನು ಇಂತಾ ಚೆಲುವೆಯನ್ನು ಕ್ಯಾಮೆರಾ ಕಣ್ಣುಗಳಲ್ಲಿ ಸೆರೆ ಹಿಡಿದ ಕ್ಯಾಮೆರಾಮ್ಯಾನ್ ಗೆ ಮ್ಯಾನ್ ಆಫ್ ದಿ ಮ್ಯಾಚ್ ಅವಾರ್ಡ್ ಸಲ್ಲಬೇಕೆಂದು ನೆಟಿಗರು ಟ್ವೀಟ್ ಮಾಡುತ್ತಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com