ಕೊಹ್ಲಿ ಅಲಭ್ಯ: ಬಾಂಗ್ಲಾ ವಿರುದ್ಧ ತವರು ನೆಲದಲ್ಲೇ ಟಿ20 ಪಂದ್ಯ ಸೋತ ಟೀಂ ಇಂಡಿಯಾ

ವಿರಾಟ್ ಕೊಹ್ಲಿ ಅಲಭ್ಯತೆ ಎದ್ದು ಕಾಣುತ್ತಿದ್ದು ಬಾಂಗ್ಲಾ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ 7 ವಿಕೆಟ್ ಗಳಿಂದ ಸೋಲು ಕಂಡಿದೆ.
ಭಾರತ-ಬಾಂಗ್ಲಾ
ಭಾರತ-ಬಾಂಗ್ಲಾ
Updated on: 

ನವದೆಹಲಿ: ವಿರಾಟ್ ಕೊಹ್ಲಿ ಅಲಭ್ಯತೆ ಎದ್ದು ಕಾಣುತ್ತಿದ್ದು ಬಾಂಗ್ಲಾ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ 7 ವಿಕೆಟ್ ಗಳಿಂದ ಸೋಲು ಕಂಡಿದೆ. 

ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ 6 ವಿಕೆಟ್ ನಷ್ಟಕ್ಕೆ 148 ರನ್ ಪೇರಿಸಿದ್ದು ಬಾಂಗ್ಲಾಗೆ 149 ರನ್ ಗಳ ಗುರಿ ನೀಡಿತ್ತು. ಈ ಗುರಿ ಬೆನ್ನಟ್ಟಿದ ಬಾಂಗ್ಲಾ ಇನ್ನು 3 ಎಸೆತ ಇರುವಂತೆ 154 ರನ್ ಬಾರಿಸಿ ಗೆಲುವಿನ ನಗೆ ಬೀರಿತು.

ಬಾಂಗ್ಲಾ ಪರ ಬ್ಯಾಟಿಂಗ್ ನಲ್ಲಿ ಮೊಹಮ್ಮದ್ ನೀಮ್ 26, ಸೌಮ್ಯ ಸರ್ಕಾರ್ 39, ಮುಶ್ಫಿಕರ್ ರಹೀಂ ಅಜೇಯ 60 ರನ್ ಬಾರಿಸಿ ತಂಡಕ್ಕೆ ಗೆಲುವು ತಂದುಕೊಂಟ್ಟರು. 

ಟೀಂ ಇಂಡಿಯಾ ಪರ ರೋಹಿತ್ ಶರ್ಮಾ 9, ಶಿಖರ್ ಧವನ್ 41, ಕೆಎಲ್ ರಾಹುಲ್ 15, ಶ್ರೇಯಸ್ ಅಯ್ಯರ್ 22, ರಿಷಬ್ ಪಂತ್ 27, ಕೃನಾಲ್ ಪಾಂಡ್ಯ ಅಜೇಯ 15 ಮತ್ತು ವಾಷ್ಟಿಂಗನ್ ಸುಂದರ್ ಅಜೇಯ 14 ರನ್ ಬಾರಿಸಿದ್ದಾರೆ.

ಬಾಂಗ್ಲಾ ಪರ ಬೌಲಿಂಗ್ ನಲ್ಲಿ ಶಫಿಯುಲ್ ಇಸ್ಲಾಂ ಮತ್ತು ಅನಿನುಲ್ ಇಸ್ಲಾಂ ತಲಾ 2 ವಿಕೆಟ್ ಮತ್ತು ಅಫಿಫ್ ಹುಸೈನ್ 1 ವಿಕೆಟ್ ಪಡೆದಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com