ಹಾರ್ದಿಕ್ ಆರ್ಭಟ: ಆಸ್ಟ್ರೇಲಿಯಾವನ್ನು ಬಗ್ಗು ಬಡಿದು ಟಿ20 ಸರಣಿ ಗೆದ್ದ ಟೀಂ ಇಂಡಿಯಾ!

ಏಕದಿನ ಸರಣಿ ಸೋಲಿಗೆ ಪ್ರತ್ಯುತ್ತರವಾಗಿ ಟೀಂ ಇಂಡಿಯಾ ಆಸ್ಟ್ರೇಲಿಯಾ ವಿರುದ್ಧ ಟಿ20 ಸರಣಿ ಗೆದ್ದು ಬೀಗಿದೆ.
ಟೀಂ ಇಂಡಿಯಾ
ಟೀಂ ಇಂಡಿಯಾ
Updated on: 

ಸಿಡ್ನಿ: ಏಕದಿನ ಸರಣಿ ಸೋಲಿಗೆ ಪ್ರತ್ಯುತ್ತರವಾಗಿ ಟೀಂ ಇಂಡಿಯಾ ಆಸ್ಟ್ರೇಲಿಯಾ ವಿರುದ್ಧ ಟಿ20 ಸರಣಿ ಗೆದ್ದು ಬೀಗಿದೆ. 

ಮೊದಲ ಟಿ20 ಪಂದ್ಯದಲ್ಲಿ ರೋಚಕ ಗೆಲುವು ಸಾಧಿಸಿದ್ದ ಟೀಂ ಇಂಡಿಯಾಗೆ ಎರಡನೇ ಟಿ20 ಪಂದ್ಯದಲ್ಲಿ ಆಸ್ಟ್ರೇಲಿಯಾ 195 ರನ್ ಗಳ ಬೃಹತ್ ಗುರಿ ನೀಡಿತ್ತು. ಈ ಗುರಿ ಬೆನ್ನಟ್ಟಿದ ಟೀಂ ಇಂಡಿಯಾ ಪರ ಶಿಖರ್ ಧವನ್, ಕೊಹ್ಲಿ ಮತ್ತು ಹಾರ್ದಿಕ್ ಪಾಂಡ್ಯ ಅಜೇಯ 42 ರನ್ ಬಾರಿಸಿ ಗೆಲುವು ತಂದುಕೊಟ್ಟಿದ್ದಾರೆ. 

ಆರಂಭಿಕರಾಗಿ ಕಣಕ್ಕಿಳಿದ ಕೆಎಲ್ ರಾಹುಲ್ ಮತ್ತು ಶಿಖರ್ ಧವನ್ ತಂಡಕ್ಕೆ ಉತ್ತಮ ಬುನಾಧಿ ಹಾಕಿಕೊಟ್ಟರು. ಈ ಜೋಡಿ 56 ರನ್ ಗಳ ಜೊತೆಯಾಟ ನೀಡಿತು. ಆದರೆ ಕೆಎಲ್ ರಾಹುಲ್ 30 ರನ್ ಗಳಿಸಿದ್ದಾಗ ಟೈ ಅವನ್ನು ಔಟ್ ಮಾಡಿ ಭಾರತಕ್ಕೆ ಮೊದಲ ಆಘಾತ ನೀಡಿದರು. ನಂತರ ಧವನ್ ಗೆ ಜೊತೆಯಾದ ಕೊಹ್ಲಿ ಸಹ ಉತ್ತಮವಾಗಿ ಬ್ಯಾಟ್ ಬೀಸಿದರು. 

ಧವನ್ 52 ರನ್ ಗಳಿಸಿದ್ದಾಗ ಜಂಪಾಗೆ ವಿಕೆಟ್ ಒಪ್ಪಿಸಿದರು. ಈ ವೇಳೆ ಕೊಹ್ಲಿ ಉದ್ವೇಗಕ್ಕೆ ಒಳಗಾಗದೆ ಶಾಂತವಾಗಿ ಬ್ಯಾಟ್ ಬೀಸಿದರು. ಆದರೆ ಸಂಜು ಸ್ಯಾಮ್ಸನ್ ಮಾತ್ರ 15 ರನ್ ಗಳಿಸಿ ಸ್ವೀಪ್ಸನ್ ಗೆ ವಿಕೆಟ್ ಒಪ್ಪಿಸಿದರು. ನಂತರ ಬಂದ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಭರ್ಜರಿ ಬ್ಯಾಟಿಂಗ್ ಮಾಡಿದರು. ಪಾಂಡ್ಯ 22 ಎಸೆತಗಳಲ್ಲಿ 2 ಸಿಕ್ಸರ್ ಮತ್ತು 3 ಬೌಂಡರಿ ಸೇರಿ 42 ರನ್ ಬಾರಿಸುವ ಮೂಲಕ ತಂಡಕ್ಕೆ ಗೆಲುವು ತಂದುಕೊಟ್ಟರು.

ಸಿಡ್ನಿಯಲ್ಲಿ ನಡೆದ ಎರಡನೇ ಟಿ20 ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ನಿಗದಿತ ಓವರ್ ನಲ್ಲಿ 5 ವಿಕೆಟ್ ನಷ್ಟಕ್ಕೆ 194 ರನ್ ಪೇರಿಸಿತ್ತು. ಆಸ್ಟ್ರೇಲಿಯಾ ಪರ ವಾಡೆ 58, ಸ್ಟೀವನ್ ಸ್ಮಿತ್ 46, ಮ್ಯಾಕ್ಸ್ ವೆಲ್ 22, ಹೆನ್ರಿಕ್ಸ್ 26 ಹಾಗೂ ಸ್ಟೋಯ್ನಿಸ್ ಅಜೇಯ 16 ರನ್ ಪೇರಿಸಿದ್ದರು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com