ಟೀಂ ಇಂಡಿಯಾವನ್ನು ಕೆಣಕಬೇಡಿ, ಸ್ಲೆಡ್ಜ್ ಮಾಡಿದ ಆಸೀಸ್ ಬ್ಯಾಟ್ಸ್‌ಮನ್ ಔಟ್ ಮಾಡಿದ ತ್ಯಾಗಿ, ವಿಡಿಯೋ ವೈರಲ್!

ಅಂಡರ್ 19 ವಿಶ್ವಕಪ್ ಟೂರ್ನಿಯಲ್ಲಿ ಟೀಂ ಇಂಡಿಯಾ ವೇಗಿ ಕಾರ್ತಿಕ್ ತ್ಯಾಗಿಯನ್ನು ಸ್ಲೆಡ್ಜ್ ಮಾಡಿದ ಆಸ್ಟ್ರೇಲಿಯಾ ಬ್ಯಾಟ್ಸ್ ಮನ್ ನನ್ನು ನಂತರ ಎಸೆತದಲ್ಲೇ ಔಟ್ ಮಾಡಿದ್ದಾರೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ನೆಟಿಗರು ಫಿದಾ ಆಗಿದ್ದಾರೆ.
ಕಾರ್ತಿಕ್ ತ್ಯಾಗಿ
ಕಾರ್ತಿಕ್ ತ್ಯಾಗಿ
Updated on

ಅಂಡರ್ 19 ವಿಶ್ವಕಪ್ ಟೂರ್ನಿಯಲ್ಲಿ ಟೀಂ ಇಂಡಿಯಾ ವೇಗಿ ಕಾರ್ತಿಕ್ ತ್ಯಾಗಿಯನ್ನು ಸ್ಲೆಡ್ಜ್ ಮಾಡಿದ ಆಸ್ಟ್ರೇಲಿಯಾ ಬ್ಯಾಟ್ಸ್ ಮನ್ ನನ್ನು ನಂತರ ಎಸೆತದಲ್ಲೇ ಔಟ್ ಮಾಡಿದ್ದಾರೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ನೆಟಿಗರು ಫಿದಾ ಆಗಿದ್ದಾರೆ.

ಸೂಪರ್ ಲೀಗ್ ನ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಕಾರ್ತಿಕ್ ತ್ಯಾಗಿ ಅವರನ್ನು ಆಸ್ಟ್ರೇಲಿಯಾ ಬ್ಯಾಟ್ಸ್ ಮನ್ ಡೇವಿಸ್ ಸ್ಲೆಡ್ಜ್ ಮಾಡಿದರು. ನಂತರದ ಎಸೆತದಲ್ಲೇ ಡೇವಿಡ್ ರನ್ನು ಔಟ್ ಮಾಡಿ ಪೆವಿಲಿಯನ್ ದಾರಿ ತೋರಿಸಿದರು.

ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವಿಡಿಯೋ ನೋಡಿದ ನೆಟಿಗರು ಫಿದಾ ಆಗಿದ್ದಾರೆ. ಅಲ್ಲದೆ ಟೀಂ ಇಂಡಿಯಾ ಆಟಗಾರರನ್ನು ಕೆಣಕಬೇಡಿ, ಕೆಣಕಿದರೇ ನೀವು ಅನುಭವಿಸುತ್ತೀರಾ ಎಂದು ಟ್ವೀಟಿಸುತ್ತಿದ್ದಾರೆ. 

ಈ ಪಂದ್ಯದಲ್ಲಿ ಟೀಂ ಇಂಡಿಯಾ 74 ರನ್ ಗಳಿಂದ ಭರ್ಜರಿ ಗೆಲುವು ಸಾಧಿಸಿ ಸೆಮಿಫೈನಲ್ ಪ್ರವೇಶಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

X
Kannada Prabha
www.kannadaprabha.com