ಬಾಹುಬಲಿ ಡೈಲಾಗ್ ಗೆ ವಾರ್ನರ್ ಲಿಪ್ ಸಿಂಕ್, ವಿಡಿಯೋ ವೈರಲ್ 

ಆಸಿಸ್ ಕ್ರಿಕೆಟಿಗ ಡೇವಿಡ್ ವಾರ್ನರ್ ಅವರ ಡಬ್ ಸ್ಮಾಷ್ ಸರಣಿ ಮುಂದುವರೆದಿದ್ದು, ಈ ಹಿಂದೆ ಬುಟ್ಟ ಬೊಮ್ಮ ಹಾಡಿಗೆ ಹೆಜ್ಜೆ ಹಾಕಿದ್ದ ವಾರ್ನರ್ ಇದೀಗ ಬಾಹುಬಲಿ ಡೈಲಾಗ್ ಗೆ ಲಿಪ್ ಸಿಂಕ್ ಮಾಡಿದ್ದಾರೆ.
ಡೇವಿಡ್ ವಾರ್ನರ್
ಡೇವಿಡ್ ವಾರ್ನರ್
Updated on: 

ಸಿಡ್ನಿ: ಆಸಿಸ್ ಕ್ರಿಕೆಟಿಗ ಡೇವಿಡ್ ವಾರ್ನರ್ ಅವರ ಡಬ್ ಸ್ಮಾಷ್ ಸರಣಿ ಮುಂದುವರೆದಿದ್ದು, ಈ ಹಿಂದೆ ಬುಟ್ಟ ಬೊಮ್ಮ ಹಾಡಿಗೆ ಹೆಜ್ಜೆ ಹಾಕಿದ್ದ ವಾರ್ನರ್ ಇದೀಗ ಬಾಹುಬಲಿ ಡೈಲಾಗ್ ಗೆ ಲಿಪ್ ಸಿಂಕ್ ಮಾಡಿದ್ದಾರೆ.

ಬಾಹುಬಲಿ ಚಿತ್ರದ ಅತ್ಯಂತ ಮನೆ ಮಾತಾಗಿದ್ದ 'ಬಾಹುಬಲಿ ಅನೆ ನೇನು' ಡೈಲಾಗ್ ಗೆ ಡೇವಿಡ್ ವಾರ್ನರ್ ಲಿಪ್ ಸಿಂಕ್ ಮಾಡಿದ್ದಾರೆ. ಅಲ್ಲದೆ ಇದಕ್ಕೆ ತಮ್ಮ ಮಗಳನ್ನು ಬಳಕೆ ಮಾಡಿಕೊಂಡಿದ್ದು, ಈ ವಿಡಿಯೋ ಇದೀಗ ವ್ಯಾಪಕ ವೈರಲ್ ಆಗುತ್ತಿದೆ. ಈ ವಿಡಿಯೋವನ್ನು ವಾರ್ನರ್ ತಮ್ಮ  ಇನ್ ಸ್ಟಾಗ್ರಾಮ್ ಖಾತೆಯಲ್ಲಿ ಅಪ್ಲೋಡ್ ಮಾಡಿದ್ದಾರೆ.

ಈ ಹಿಂದೆ ತೆಲುಗಿನ ಅಲಾ ವೈಕುಂಠ ಪುರಂ ಲೋ ಚಿತ್ರದ ಬುಟ್ಟ ಬೊಮ್ಮ ಹಾಡಿಗೆ ಹೆಜ್ಜೆ ಹಾಕಿದ್ದ ವಾರ್ನರ್ ದಂಪತಿ ಬಳಿಕ ರಾಮುಲೋ ರಾಮುಲಾ ಸಾಂಗಿಗೆ ಸೊಂಟ ಬಳುಕಿಸಿದ್ದರು, ಇದೀಗ ವಾರ್ನರ್ ಯೋಧನ ಗೆಟಪ್ ನಲ್ಲಿ ಬಾಹುಬಲಿ ಡೈಲಾಗ್ ಹೇಳಿದ್ದಾರೆ. ಆ ಮೂಲಕ ತಮ್ಮ  ಭಾರತೀಯ ಅಭಿಮಾನಿಗಳ ಮನ ಗೆಲ್ಲುವ ಪ್ರಯತ್ನ ಮಾಡಿದ್ದಾರೆ. ಇನ್ನು ವಾರ್ನರ್ ಐಪಿಎಲ್ ನಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ.

 
 
 
 
 
 
 
 
 
 
 
 
 

Guess the movie!! @sunrisershyd

A post shared by David Warner (@davidwarner31) on

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com