ಸರಣಿ ಗೆಲುವು ಸಂಪೂರ್ಣ ತೃಪ್ತಿ ತಂದಿದೆ, ಮುಂದಿನ ಸರಣಿಗೂ ಕೆಎಲ್ ರಾಹುಲ್ ವಿಕೆಟ್ ಕೀಪರ್: ವಿರಾಟ್ ಕೊಹ್ಲಿ

ಆಸ್ಟ್ರೇಲಿಯಾ ವಿರುದ್ಧ ಕಳೆದ ವರ್ಷ ಸೋಲು ಅನುಭವಿಸಿದ್ದ ನಮಗೆ ಈ ಬಾರಿ ಮೂರು ಪಂದ್ಯಗಳ ಸರಣಿ ಗೆದ್ದಿರುವುದು ಸಂಪೂರ್ಣ ತೃಪ್ತಿ ತಂದಿದೆ ಎಂದು ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಹೇಳಿದ್ದಾರೆ.

Published: 20th January 2020 11:38 AM  |   Last Updated: 20th January 2020 12:38 PM   |  A+A-


Captain Virat Kohli

ಸಂಗ್ರಹ ಚಿತ್ರ

Posted By : Srinivasamurthy VN
Source : PTI

ಬೆಂಗಳೂರು: ಆಸ್ಟ್ರೇಲಿಯಾ ವಿರುದ್ಧ ಕಳೆದ ವರ್ಷ ಸೋಲು ಅನುಭವಿಸಿದ್ದ ನಮಗೆ ಈ ಬಾರಿ ಮೂರು ಪಂದ್ಯಗಳ ಸರಣಿ ಗೆದ್ದಿರುವುದು ಸಂಪೂರ್ಣ ತೃಪ್ತಿ ತಂದಿದೆ ಎಂದು ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಹೇಳಿದ್ದಾರೆ.

ನಿನ್ನೆ ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ 3ನೇ ಹಾಗೂ ಅಂತಿಮ ಏಕದಿನ ಪಂದ್ಯದಲ್ಲಿ ವಿಕೆಟ್ ಗಳ ಅಂತರದಲ್ಲಿ ಪ್ರಬಲ ಆಸ್ಚ್ರೇಲಿಯಾ ತಂಡವನ್ನು ಮಣಿಸಿ ಏಕದಿನ ಸರಣಿಯನ್ನು ಭಾರತ ತಂಡ ಕೈವಶ ಮಾಡಿಕೊಂಡಿತು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ನಾಯಕ ವಿರಾಟ್ ಕೊಹ್ಲಿ, 'ಪಂದ್ಯ ಆರಂಭದಲ್ಲಿಯೇ ನಾವು ಅನುಭವಿ ಆರಂಭಿನ ಬ್ಯಾಟ್ಸ್ ಮನ್ ಶಿಖರ್ ಧವನ್ ಅವರನ್ನು ಕಳೆದುಕೊಂಡವು. ಅವರ ಸ್ಥಾನದಲ್ಲಿ ಕೆ.ಎಲ್ ರಾಹುಲ್ ಆರಂಭಿನಾಗಿ ಆಡಿದರು. ಉತ್ತಮ ಆರಂಭದ ಹೊರತಾಗಿಯೂ ರಾಹುಲ್ ವಿಕೆಟ್ ಒಪ್ಪಿಸಿದರು. ಏಕೆಂದರೆ, ಆ ವೇಳೆ ಚೆಂಡು ತಿರುಗುತ್ತಿತ್ತು. ನಾನು ಕ್ರೀಸ್ ಗೆ ಹೋದ ಬಳಿಕ ರೋಹಿತ್ ಶರ್ಮಾ ಬಳಿ ಮಾತನಾಡಿಕೊಂಡು ಎಚ್ಚರಿಕೆಯ ಹೆಜ್ಜೆ ಇಟ್ಟೆವು. ಆಸ್ಟ್ರೇಲಿಯಾ ವಿಕೆಟ್ ಗಾಗಿ ಹಾತೊರೆಯುತ್ತಿದ್ದು, ನಾವು ದೊಡ್ಡ ಜೊತೆಯಟವಾಡುವ ಅಗತ್ಯವಿದೆ ಎಂದು ಮಾತನಾಡಿಕೊಂಡೆವು ಎಂದು ಕೊಹ್ಲಿ ಹೇಳಿದರು.

ಮುಂದಿನ ಸರಣಿಗೂ ಕೆಎಲ್ ರಾಹುಲ್ ವಿಕೆಟ್ ಕೀಪರ್
ಇನ್ನು ಇದೇ ವೇಳೆ ಕೆಎಲ್ ರಾಹುಲ್ ಆಟವನ್ನು ಕೊಂಡಾಡಿದ ಕೊಹ್ಲಿ, ಈ ಪಂದ್ಯದ ಗೆಲುವಿನಲ್ಲಿ ರಾಹುಲ್ ಪಾತ್ರ ಪ್ರಮುಖವಾಗಿತ್ತು, ಕೇವಲ ಓರ್ವ ಬ್ಯಾಟ್ಸ್ ಮನ್ ಆಗಿ ಮಾತ್ರವಲ್ಲದೇ ರಾಹುಲ್ ವಿಕೆಟ್ ಕೀಪರ್ ಆಗಿಯೂ ನಿರ್ಣಾಯಕ ಪಾತ್ರ ನಿರ್ವಹಿಸಿದ್ದಾರೆ. ಹೀಗಾಗಿ ಮುಂದಿನ ಕೆಲ ಸರಣಿಗಳಿಗೂ ಕೆಎಲ್ ರಾಹುಲ್ ರನ್ನೇ ವಿಕೆಟ್ ಕೀಪರ್ ಆಗಿ ಮುಂದುವರೆಸುವ ಇಂಗಿತವನ್ನು ಕೊಹ್ಲಿ ವ್ಯಕ್ತಪಡಿಸಿದರು,

ಇನ್ನು ನಿನ್ನೆ ಪಂದ್ಯದಲ್ಲಿ ರೋಹಿತ್ ಶರ್ಮಾ ಶತಕ ಹಾಗೂ ವಿರಾಟ್ ಕೊಹ್ಲಿ ಅರ್ಧಶತಕದ ಬಲದಿಂದ ಮೂರನೇ ಹಾಗೂ ಸರಣಿ ನಿರ್ಣಾಯಕ ಪಂದ್ಯದಲ್ಲಿ ಆಸ್ಟ್ರೇಲಿಯಾ ನೀಡಿದ್ದ 287 ರನ್ ಗುರಿಯನ್ನು ಟೀಮ್ ಇಂಡಿಯಾ ಯಶಸ್ವಿಯಾಗಿ ಮುಟ್ಟಿತ್ತು. ಏಳು ವಿಕೆಟ್ ಹಾಗೂ ಇನ್ನೂ 15 ಎಸೆತಗಳು ಬಾಕಿ ಇರುವಾಗಲೇ ಭಾರತ ಗೆದ್ದು ಬಿಗಿತ್ತು. ಆ ಮೂಲಕ ಮೂರು ಪಂದ್ಯಗಳ ಏಕದಿನ ಸರಣಿಯನ್ನು ಕೊಹ್ಲಿ ಪಡೆ 2-1` ಅಂತರದಲ್ಲಿ ತನ್ನದಾಗಿಸಿಕೊಂಡಿತು.

Stay up to date on all the latest ಕ್ರಿಕೆಟ್ news with The Kannadaprabha App. Download now
facebook twitter whatsapp