ದುಬೈ: ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಪಾಲ್ಗೊಂಡಿರುವ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ವಿಚಿತ್ರ ದಾಖಲೆಯೊಂದನ್ನು ಬರೆದಿದ್ದಾರೆ.
ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಅವರಿಗೆ ಟಾಸ್ ವಿನ್ ಎಂಬುದು ಬಹುತೇಕ ಮರೀಚಿಕೆಯಾಗಿದೆ ಎಂಬುದನ್ನು ಅಂಕಿಅಂಶಗಳು ಹೇಳುತ್ತಿವೆ. ಹೌದು.. ಟಿ20 ಕ್ರಿಕೆಟ್ ನಲ್ಲಿ ಭಾರತ ತಂಡದ ನಾಯಕ ವಿಚಿತ್ರ ದಾಖಲೆ ಬರೆದಿದ್ದು, ಇಂದಿನ ಪಂದ್ಯವೂ ಸೇರಿದಂತೆ ಕೊಹ್ಲಿ ಕಳೆದ 9 ಪಂದ್ಯಗಳಲ್ಲಿ ಕೇವಲ 2 ಬಾರಿ ಮಾತ್ರ ಟಾಸ್ ವಿನ್ ಆಗಿದ್ದಾರೆ.
ಅಂತೆಯೇ ಮತ್ತೊಂದು ವಿಚಿತ್ರ ಎಂದರೆ ಕೊಹ್ಲಿ ಟಾಸ್ ಸೋತಾಗಲೆಲ್ಲಾ ಮೊದಲು ಬ್ಯಾಟಿಂಗ್ ಮಾಡುವಂತೆ ಆಹ್ವಾನಿಸಲ್ಪಟ್ಟಿದ್ದಾರೆ. ಟಿ20 ಕ್ರಿಕೆಟ್ ಇತಿಹಾಸದಲ್ಲಿ ಇಂತಹುದೊಂದು ದಾಖಲೆ ಕೊಹ್ಲಿ ಮೂಲಕ ದಾಖಲಾಗಿದೆ.
ಇನ್ನು ಇಂದು ಟಾಸ್ ಗೆದ್ದ ಬಳಿಕ ಮಾತನಾಡಿದ ವಿರಾಟ್ ಕೊಹ್ಲಿ, ಖಂಡಿತಾ ಇಂದಿನ ಪಂದ್ಯದಲ್ಲಿ ಇಬ್ಬನಿ ನಿರ್ಣಾಯಕ ಪಾತ್ರವಹಿಸಲಿದೆ. ಪ್ರಸ್ತುತ ನಮ್ಮ ಗುರಿ ಸ್ಕಾಟ್ಲೆಂಡ್ ತಂಡವನ್ನು ಕಡಿಮೆ ಸ್ಕೋರ್ ಗೆ ನಿಯಂತ್ರಿಸಿ ಆ ಗುರಿಯನ್ನು ಆದಷ್ಟು ಬೇಗ ತಲುಪಿ ದೊಡ್ಡ ಜಯ ಗಳಿಸಬೇಕು ಎಂಬುದು ಎಂದು ಹೇಳಿದ್ದಾರೆ.
ಅಂತೆಯೇ ಜನ್ಮದಿನದಂದು ಟಾಸ್ ಗೆದ್ದಿದ್ದು ಖುಷಿ ನೀಡಿದೆ. ಬಹುಶಃ ನಾವು ನಮ್ಮ ಮೊದಲ ಪಂದ್ಯವನ್ನು ನನ್ನ ಜನ್ಮದಿನದಂದೇ ಆಡಬೇಕಿತ್ತು ಕೊಹ್ಲಿ ಹಾಸ್ಯ ಚಟಾಕಿ ಹಾರಿಸಿದ್ದಾರೆ.
ಟಿ20 ವಿಶ್ವಕಪ್: ನಮೀಬಿಯಾ ವಿರುದ್ಧ ನ್ಯೂಜಿಲೆಂಡ್ ಗೆ ಭರ್ಜರಿ ಜಯ, ಭಾರತದ ಸೆಮೀಸ್ ಕನಸು ಮತ್ತಷ್ಟು ಕಠಿಣ
ಟಿ20 ವಿಶ್ವಕಪ್: ಟಾಸ್ ಗೆದ್ದ ಬರ್ತ್ ಡೇ ಬಾಯ್ ಕೊಹ್ಲಿ, ಭಾರತ ಫೀಲ್ಡಿಂಗ್ ಆಯ್ಕೆ
ಟಿ20 ವಿಶ್ವಕಪ್ ಬಳಿಕ ಎಲ್ಲಾ ಆವೃತ್ತಿಯ ಕ್ರಿಕೆಟ್ ನಿಂದ ವೆಸ್ಟ್ ಇಂಡೀಸ್ ಆಲ್ ರೌಂಡರ್ ಡ್ವೇನ್ ಬ್ರಾವೋ ನಿವೃತ್ತಿ
ಜನಾಂಗೀಯ ನಿಂದನೆ ವಿವಾದ: ಅಂತಾರಾಷ್ಟ್ರೀಯ ಪಂದ್ಯಗಳನ್ನು ನಡೆಸದಂತೆ ಯಾರ್ಕ್ಷೈರ್ ಗೆ ನಿರ್ಬಂಧ!
ಟಿ20 ವಿಶ್ವಕಪ್: ಶ್ರೀಲಂಕಾ ಭರ್ಜರಿ ಆಟ: ಹಾಲಿ ಚಾಂಪಿಯನ್ ವಿಂಡೀಸ್ ಟೂರ್ನಿಯಿಂದಲೇ ಔಟ್
ಟೀಂ ಇಂಡಿಯಾದ ನೂತನ ಕೋಚ್ ರಾಹುಲ್ ದ್ರಾವಿಡ್ ಬಗ್ಗೆ ಉಪನಾಯಕ ರೋಹಿತ್ ಶರ್ಮಾ ಹೇಳಿದ್ದೇನು?
Advertisement