ಮತ್ತೆ ವಿದೇಶಿ ಟಿ20ಯಲ್ಲಿ ಮಿಂಚಲಿರುವ ಯುವರಾಜ್ ಸಿಂಗ್; ಆಸ್ಟ್ರೇಲಿಯಾದಲ್ಲಿ ಅಖಾಡಕ್ಕೆ!

ಖ್ಯಾತ ಕ್ರಿಕೆಟ್ ಆಟಗಾರರಾದ ಯುವರಾಜ್ ಸಿಂಗ್, ಕ್ರಿಸ್ ಗೇಯ್ಲ್, ಎಬಿ ಡಿವಿಲಿಯರ್ಸ್ ರಂತ ಆಟಗಾರರು ಮುಂದಿನ ದಿನಗಳಲ್ಲಿ ಆಸ್ಟ್ರೇಲಿಯಾದಲ್ಲಿ ಆಡುವ ಸಾಧ್ಯತೆಗಳಿವೆ. 
ಯುವರಾಜ್ ಸಿಂಗ್
ಯುವರಾಜ್ ಸಿಂಗ್
Updated on

ಖ್ಯಾತ ಕ್ರಿಕೆಟ್ ಆಟಗಾರರಾದ ಯುವರಾಜ್ ಸಿಂಗ್, ಕ್ರಿಸ್ ಗೇಯ್ಲ್, ಎಬಿ ಡಿವಿಲಿಯರ್ಸ್ ರಂತ ಆಟಗಾರರು ಮುಂದಿನ ದಿನಗಳಲ್ಲಿ ಆಸ್ಟ್ರೇಲಿಯಾದಲ್ಲಿ ಆಡುವ ಸಾಧ್ಯತೆಗಳಿವೆ. 

ಮೆಲ್ಬೋರ್ನ್ ನ ಕ್ರಿಕೆಟ್ ಕ್ಲಬ್ ನಲ್ಲಿ ಆಡುವ ಸಾಧ್ಯತೆಗಳಿವೆ ಎಂದು ಮುಲ್ಗ್ರೇವ್ ಕ್ರಿಕೆಟ್ ಕ್ಲಬ್ ಅಧ್ಯಕ್ಷ ಮಿಲನ್ ಪುಲ್ಲನಾಯೆಗಮ್ ಹೇಳಿದೆ. ಇದೇ ವೇಳೆ ಈ ಕ್ಲಬ್ ಬ್ರಿಯಾನ್ ಲಾರಾ ಜೊತೆ ಸಹ ಮಾತುಕತೆ ನಡೆಸುತ್ತಿದ್ದಾರೆ. 

ಮುಲ್ಗ್ರೇವ್ ಈಗಾಗಲೇ ಶ್ರೀಲಂಕಾದ ತಿಲಕರತ್ನೆ ದಿಲ್ಶನ್ ಮತ್ತು ಉಪುಲ್ ತರಂಗಾ ಅವರು ಬೇಸಿಗೆಯಲ್ಲಿ ಸನತ್ ಜಯಸೂರ್ಯ ಅವರ ಮುಖ್ಯ ತರಬೇತುದಾರರಾಗಿ ಸೇವೆ ಸಲ್ಲಿಸಿದ್ದಾರೆ.

ದಿಲ್ಶಾನ್, ಸನತ್ ಜಯಸೂರ್ಯ, ತರಂಗಾ ತಂಡದಲ್ಲಿದ್ದು ನಾವು ಇತರ ಕೆಲವು ಸಂಭಾವ್ಯ ಆಟಗಾರರೊಂದಿಗೆ ಒಪ್ಪಂದಗಳನ್ನು ಅಂತಿಮಗೊಳಿಸುವ ಕೆಲಸ ಮಾಡುತ್ತಿದ್ದೇವೆ ಎಂದು ಪುಲ್ಲೆನಾಯಗಮ್ 'ಕ್ರಿಕೆಟ್.ಕಾಮ್'ಗೆ ತಿಳಿಸಿದರು.

"ನಾವು ಮಾತುಕತೆ ಮುಂದುವರೆಸಿದ್ದೇವೆ. ಕ್ರಿಸ್ ಗೇಯ್ಲ್ ಮತ್ತು ಯುವರಾಜ್ ಅವರೊಂದಿಗೆ ಮಾತನಾಡುತ್ತಿದ್ದು ಅವರು ಆಡುವ ಅವಕಾಶ 85 ರಿಂದ 90 ಪ್ರತಿಶತದಷ್ಟು ಇದೆ ಎಂದರು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com