ಐಪಿಎಲ್ 2021: ಮುಂಬೈ ತಂಡವನ್ನು 4 ವಿಕೆಟ್ ಗಳಿಂದ ಮಣಿಸಿದ ರಿಷಬ್ ಪಂತ್ ಪಡೆ!

ಇಂಡಿಯನ್ ಪ್ರಿಮಿಯರ್ ಲೀಗ್(ಐಪಿಎಲ್)ನ 46ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ಮುಂಬೈ ಇಂಡಿಯನ್ಸ್ ತಂಡವನ್ನು 4 ವಿಕೆಟ್ ಗಳಿಂದ ಮಣಿಸಿದೆ. 
ಅವೇಶ್ ಖಾನ್
ಅವೇಶ್ ಖಾನ್

ಶಾರ್ಜಾ: ಇಂಡಿಯನ್ ಪ್ರಿಮಿಯರ್ ಲೀಗ್(ಐಪಿಎಲ್)ನ 46ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ಮುಂಬೈ ಇಂಡಿಯನ್ಸ್ ತಂಡವನ್ನು 4 ವಿಕೆಟ್ ಗಳಿಂದ ಮಣಿಸಿದೆ. 

ಶಾರ್ಜಾದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಮುಂಬೈ ಇಂಡಿಯನ್ಸ್ 8 ವಿಕೆಟ್ ನಷ್ಟಕ್ಕೆ 129 ರನ್ ಪೇರಿಸಿತ್ತು. ಅಲ್ಪ ಮೊತ್ತದ ಗುರಿಯನ್ನು ಬೆನ್ನಟ್ಟಿದ ಡೆಲ್ಲಿ ಕ್ಯಾಪಿಟಲ್ಸ್ ತಂಡ 6 ವಿಕೆಟ್ ನಷ್ಟಕ್ಕೆ 132 ರನ್ ಬಾರಿಸಿ ಗೆಲುವಿನ ನಗೆ ಬೀರಿತು. 

ಮುಂಬೈ ಪರ ರೋಹಿತ್ ಶರ್ಮಾ 7, ಡಿಕಾಕ್ 19, ಸೂರ್ಯಕುಮಾರ್ ಯಾದವ್ 33, ಹಾರ್ತಿಕ್ ಪಾಂಡ್ಯ 17 ರನ್ ಬಾರಿಸಿದ್ದಾರೆ. 

ಡೆಲ್ಲಿ ಪರ ರಿಷಬ್ ಪಂತ್ 26 ಹಾಗೂ ನಾಯಕ ಶ್ರೇಯಸ್ ಅಯ್ಯರ್ ಅಜೇಯ 33 ನೆರವಿನಿಂದ ತಂಡ 4 ವಿಕೆಟ್ ಗಳ ಜಯ ಗಳಿಸುವಲ್ಲಿ ಸಾಧ್ಯವಾಯಿತು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com