ಟಿ20 ವಿಶ್ವಕಪ್ 2022: ಟೀಂ ಇಂಡಿಯಾಗೆ ಗೆಲ್ಲಲು 160 ರನ್ ಗುರಿ ನೀಡಿದ ಪಾಕಿಸ್ತಾನ!

ಟಿ20 ವಿಶ್ವಕಪ್ 2022ರ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ತಂಡ ಟೀಂ ಇಂಡಿಯಾಗೆ 160 ರನ್ ಗಳ ಗುರಿ ನೀಡಿದೆ. 
ಟೀಂ ಇಂಡಿಯಾ-ಪಾಕಿಸ್ತಾನ
ಟೀಂ ಇಂಡಿಯಾ-ಪಾಕಿಸ್ತಾನ

ಟಿ20 ವಿಶ್ವಕಪ್ 2022ರ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ತಂಡ ಟೀಂ ಇಂಡಿಯಾಗೆ 160 ರನ್ ಗಳ ಗುರಿ ನೀಡಿದೆ. 

ಮೆಲ್ಬೋರ್ನ್ ನಲ್ಲಿ ನಡೆಯುತ್ತಿರುವ ಗ್ರೂಪ್ 2 ಹಂತದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ ನಿಗದಿತ ಓವರ್ ನಲ್ಲಿ 8 ವಿಕೆಟ್ ನಷ್ಟಕ್ಕೆ 159 ರನ್ ಬಾರಿಸಿದೆ. ಆರಂಭಿಕ ಆಘಾತ ಎದುರಿಸಿದ ಪಾಕಿಸ್ತಾನಕ್ಕೆ ಶಾನ್ ಮಸೂದ್ ಅಜೇಯ 52 ರನ್ ಹಾಗೂ ಇಫ್ತಿಕರ್ ಅಹ್ಮದ್ 51 ರನ್ ಬಾರಿ ತಂಡಕ್ಕೆ ಸ್ಪಲ್ಪ ಚೇತರಿಕೆ ತಂದುಕೊಟ್ಟಿತು. 

ಇನ್ನುಳಿದಂತೆ ಪಾಕ್ ಪರ ಮೊಹಮ್ಮದ್ ರಿಜ್ವಾನ್ 4, ಬಾಬರ್ ಅಜಾಂ 0, ಶಬಾಬ್ ಖಾನ್ 5, ಹೈದರ್ ಅಲಿ 2 ಇನ್ನು ಶಾಹಿನ್ ಶಾ ಅಫ್ರಿದಿ 16 ರನ್ ಪೇರಿಸಿದ್ದಾರೆ. 

ಟೀಂ ಇಂಡಿಯಾ ಪರ ಬೌಲಿಂಗ್ ನಲ್ಲಿ ಹರ್ಷದೀಪ್ ಸಿಂಗ್ ಮತ್ತು ಹಾರ್ದಿಕ್ ಪಾಂಡ್ಯ ತಲಾ 3 ವಿಕೆಟ್ ಪಡೆದಿದ್ದಾರೆ. ಇನ್ನು ಭುವನೇಶ್ವರ್ ಕುಮಾರ್ ಮತ್ತು ಮೊಹಮ್ಮದ್ ಶಮಿ ತಲಾ 1 ವಿಕೆಟ್ ಪಡೆದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com