IPL 2024: ಡೆಲ್ಲಿ ವಿರುದ್ಧ ಜಯ, 5ನೇ ಸ್ಥಾನಕ್ಕೆ ಜಿಗಿದ RCB, ಪ್ಲೇ ಆಫ್ ಗೇರಲು ಏನು ಮಾಡಬೇಕು?

ಡೆಲ್ಲಿ ಕ್ಯಾಪಿಟಲ್ಸ್ ವಿರುದ್ದ ಭರ್ಜರಿ ಜಯದೊಂದಿಗೆ ಬೆಂಗಳೂರು ರಾಯಲ್ ಚಾಲೆಂಜರ್ಸ್ ತಂಡ ಉತ್ತಮ ರನ್ ರೇಟ್ ನೊಂದಿಗೆ ಅಂಕಪಟ್ಟಿಯಲ್ಲಿ 5ನೇ ಸ್ಥಾನಕ್ಕೆ ಜಿಗಿದಿದ್ದು, ಪ್ಲೇ ಆಫ್ ಆಸೆಯನ್ನು ಜೀವಂತವಾಗಿರಿಸಿದೆ.
RCB
ಆರ್ ಸಿಬಿ
Updated on: 

ಬೆಂಗಳೂರು: ಡೆಲ್ಲಿ ಕ್ಯಾಪಿಟಲ್ಸ್ ವಿರುದ್ದ ಭರ್ಜರಿ ಜಯದೊಂದಿಗೆ ಬೆಂಗಳೂರು ರಾಯಲ್ ಚಾಲೆಂಜರ್ಸ್ ತಂಡ ಉತ್ತಮ ರನ್ ರೇಟ್ ನೊಂದಿಗೆ ಅಂಕಪಟ್ಟಿಯಲ್ಲಿ 5ನೇ ಸ್ಥಾನಕ್ಕೆ ಜಿಗಿದಿದ್ದು, ಪ್ಲೇ ಆಫ್ ಆಸೆಯನ್ನು ಜೀವಂತವಾಗಿರಿಸಿದೆ.

ನಿನ್ನೆ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಆರ್‌‌ಸಿಬಿ ನಿಗದಿತ 20 ಓವರ್‌ಗೆ 9 ವಿಕೆಟ್ ನಷ್ಟಕ್ಕೆ 187 ರನ್‌ ಸಿಡಿಸಿತು. ಈ ಟಾರ್ಗೆಟ್‌‌ ಬೆನ್ನಟ್ಟಿದ ಡೆಲ್ಲಿ ಕ್ಯಾಪಿಟಲ್ಸ್‌ ತಂಡವು 19.1 ಓವರ್‌ಗೆ 10 ವಿಕೆಟ್ ನಷ್ಟಕ್ಕೆ 140 ರನ್‌ ಗಳಿಸುವ ಮೂಲಕ 47 ರನ್‌ಗಳ ಸೋಲನ್ನಪ್ಪಿತು.

RCB
IPL 2024: ಕೊಹ್ಲಿಯನ್ನೇ ಕೆಣಕಿದ Ishant Sharma, ದೊಡ್ಡ ಜಗಳದಿಂದ ಕೊಂಚದರಲ್ಲೇ ಪಾರು, Virat kohli ಪ್ರತಿಕ್ರಿಯೆ Video ವೈರಲ್!

ಈ ಭರ್ಜರಿ ಗೆಲುವಿನ ಮೂಲಕ ಆರ್‌‌ಸಿಬಿ ಪಡೆ ಅಂಕಪಟ್ಟಿಯಲ್ಲಿ +0.39ರ ರನ್‌ರೇಟ್‌‌ ಜೊತೆಗೆ ಆಡಿರುವ 13 ಪಂದ್ಯದಲ್ಲಿ 6ರಲ್ಲಿ ಗೆದ್ದು 7ರಲ್ಲಿ ಸೋಲನ್ನಪ್ಪಿದೆ. ಈ ಮೂಲಕ ಆರ್‌ಸಿಬಿ ತಂಡ 5ನೇ ಸ್ಥಾನಕ್ಕೆ ಜಿಗಿದಿದ್ದು, ಈ ಬಾರಿಯ ಪ್ಲೇಆಫ್‌ ರೇಸ್‌‌ನಲ್ಲಿ ಇನ್ನೂ ಸಹ ಉಳಿದುಕೊಂಡಿದೆ.

RCB ಪ್ಲೇಆಫ್ ಪ್ರವೇಶಿಸಲು ಯಾವೆಲ್ಲಾ ತಂಡ ಸೋಲಬೇಕು?

ಐಪಿಎಲ್ ಸೀಸನ್ 17 ರಲ್ಲಿ ಆರ್​ಸಿಬಿ ತಂಡವು ಒಟ್ಟು 13 ಪಂದ್ಯಗಳನ್ನಾಡಿದೆ. ಈ ಹದಿಮೂರು ಮ್ಯಾಚ್​ಗಳಲ್ಲಿ 6 ಪಂದ್ಯಗಳಲ್ಲಿ ಗೆಲುವು ಸಾಧಿಸಿರುವ ಫಾಫ್ ಪಡೆ ಇದೀಗ ಅಂಕ ಪಟ್ಟಿಯಲ್ಲಿ 5ನೇ ಸ್ಥಾನಕ್ಕೇರಿದೆ. ಇನ್ನು ಆರ್​ಸಿಬಿ ತಂಡದ ಕೊನೆಯ ಎದುರಾಳಿ ಚೆನ್ನೈ ಸೂಪರ್ ಕಿಂಗ್ಸ್​. ಈ ಪಂದ್ಯವು ಉಭಯ ತಂಡಗಳ ಪಾಲಿಗೆ ನಿರ್ಣಾಯಕವಾಗಿದೆ.

ಕೊನೆಯ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮುಖಾಮುಖಿಯಾಗಲಿದ್ದು, ಈ ಪಂದ್ಯವು ಪ್ಲೇಆಫ್ ಹಂತಕ್ಕೇರಲು ಉಭಯ ತಂಡಗಳಿಗೆ ನಿರ್ಣಾಯಕ. ಈ ಮ್ಯಾಚ್​ನಲ್ಲಿ ಆರ್​ಸಿಬಿ ಗೆದ್ದರೆ ಟಾಪ್-4 ಹಂತಕ್ಕೇರಲಿದೆ.

ಪಂದ್ಯ ಗೆದ್ದರೂ ಆರ್ ಸಿಬಿಗಿಲ್ಲ ಸಮಾಧಾನ

ಆದರೆ ಇದೊಂದೇ ಪಂದ್ಯದ ಗೆಲುವಿನಿಂದ ಆರ್​ಸಿಬಿ ತಂಡದ ಪ್ಲೇಆಫ್ ಖಚಿತವಾಗುವುದಿಲ್ಲ. ಬದಲಾಗಿ ಅತ್ತ ಡೆಲ್ಲಿ ಕ್ಯಾಪಿಟಲ್ಸ್, ಲಕ್ನೋ ಸೂಪರ್ ಜೈಂಟ್ಸ್ ಹಾಗೂ ಗುಜರಾತ್ ಟೈಟಾನ್ಸ್ ತಂಡಗಳು ಕೂಡ 12 ಅಂಕಗಳೊಂದಿಗೆ ಪ್ಲೇಆಫ್ ರೇಸ್​ನಲ್ಲಿದೆ. ಹೀಗಾಗಿ ಈ ತಂಡಗಳ ಫಲಿತಾಂಶ ಕೂಡ ಇಲ್ಲಿ ಮುಖ್ಯವಾಗುತ್ತದೆ. ಪ್ರಮುಖವಾಗಿ ಲಕ್ನೋ ಸೂಪರ್ ಜೈಂಟ್ಸ್ ತಂಡಕ್ಕೆ ಇನ್ನೂ 2 ಪಂದ್ಯಗಳಿವೆ.

ಈ ಮ್ಯಾಚ್​ಗಳಲ್ಲಿ ಜಯ ಸಾಧಿಸಿದರೆ ಕೆಎಲ್ ರಾಹುಲ್ ಪಡೆ 16 ಅಂಕಗಳೊಂದಿಗೆ ಪ್ಲೇಆಫ್ ಹಂತಕ್ಕೇರುವುದು ಬಹುತೇಕ ಖಚಿತ. ಹೀಗಾಗಿ ಎಲ್​ಎಸ್​ಜಿ ತಂಡವು ಮುಂದಿನ 2 ಪಂದ್ಯಗಳಲ್ಲೂ ಸೋಲನುಭವಿಸಬೇಕು. ಅಥವಾ ಒಂದು ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಅಥವಾ ಮುಂಬೈ ಇಂಡಿಯನ್ಸ್ ಜಯ ಸಾಧಿಸಬೇಕು.

RCB
IPL 2024: ಐಪಿಎಲ್ ಇತಿಹಾಸದಲ್ಲೇ ಅತಿಹೆಚ್ಚು ಡಕೌಟ್, ಕಳಪೆ ದಾಖಲೆ ಬರೆದ RCBಯ Dinesh Karthik

ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಒಂದು ಪಂದ್ಯವಿದ್ದು, ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಈ ಪಂದ್ಯದಲ್ಲಿ ರಿಷಭ್ ಪಂತ್ ಪಡೆ ಸಾಧಾರಣ ಗೆಲುವು ಸಾಧಿಸಬೇಕು. ಒಂದು ವೇಳೆ ಡೆಲ್ಲಿ ಕ್ಯಾಪಿಟಲ್ಸ್ ತಂಡ ಭರ್ಜರಿ ಜಯ ಸಾಧಿಸಿದರೆ ಉತ್ತಮ ನೆಟ್​ ರನ್​ ರೇಟ್​ನೊಂದಿಗೆ ಒಟ್ಟು 14 ಅಂಕಗಳೊಂದಿಗೆ ಪ್ಲೇಆಫ್ ಪ್ರವೇಶಿಸಬಹುದು.

ಇನ್ನು ಗುಜರಾತ್ ಟೈಟಾನ್ಸ್ ತಂಡವು 12 ಪಂದ್ಯಗಳಿಂದ ಒಟ್ಟು 10 ಅಂಕಗಳನ್ನು ಕಲೆಹಾಕಿದೆ. ಮುಂದಿನ 2 ಮ್ಯಾಚ್​ಗಳಲ್ಲಿ ಗುಜರಾತ್ ತಂಡವು ಅಮೋಘ ಗೆಲುವು ಸಾಧಿಸಿದರೆ 14 ಅಂಕಗಳೊಂದಿಗೆ ಪ್ಲೇಆಫ್ ಪ್ರವೇಶಿಸುವ ಅವಕಾಶ ಹೊಂದಿದೆ. ಹೀಗಾಗಿ ಜಿಟಿ ತಂಡದ ಒಂದು ಸೋಲನ್ನು ಆರ್​ಸಿಬಿ ಎದುರು ನೋಡಲಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com